ಕ್ರೀಡಾಕೂಟದಲ್ಲಿ ಪದಕ ಸಾಧನೆ

5sor2
ಕ್ರೀಡಾಕೂಟದಲ್ಲಿ ಪದಕ ವಿಜೇತ ಸೊರಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕರು.
Published on

ಸೊರಬ: ತಾಲೂಕಿನ ಉದ್ರಿಯಲ್ಲಿ ಆಯೋಜಿಸಿದ್ದ ಕಸಬಾ ಎ ವಲಯದ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಖೋ-ಖೋ, ಕಬಡ್ಡಿ, ಥ್ರೋಬಾಲ್, 200 ಮೀ. ರಿಲೇ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ. ವಾಲಿಬಾಲ್, 800 ಮೀ. ಹಾಗೂ 1500 ಮೀ. ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ. 400 ಮೀ, 800 ಮೀ, 3000 ಮೀ, 100 ಮೀ, ಹಾಗೂ 200 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಕಮಲಕರ, ಶಿಕ್ಷಕರಾದ ಹಾಲಪ್ಪ, ಡಿ.ಪಕೀರಪ್ಪ, ಆರ್.ಎಸ್.ನೂಲಗೇರಿ, ಲತಾಮಣಿ ನಾಗರತ್ನ, ನಾಗಜೋತಿ, ಧರ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net