ಅಹಿತಕರ ಟನೆ ತಡೆಗೆ ಕ್ರಮ

FotoJet
Published on

ಕೋಲಾರ: ಹೊಸ ವರ್ಷ ಸ್ವಾಗತಿಸಲು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದು, ಹೊಸ ವರ್ಷಾಚರಣೆಯ ದಿನ ಯಾವುದೇ ಅಹಿತಕರ ಟನೆಗಳು ಸಂಭವಿಸದಂತೆ ಪೊಲೀಸ್​ ಇಲಾಖೆಯಿಂದ ಸಲಕ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಒಂದು ಕಾಲಮಿಯೊಳಗೆ ಆಚರಣೆ ಮಾಡಿ ಮನೆ ಸೇರಿಕೊಳ್ಳಬೇಕು. ಯುವಕರು ಸಹ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರು 2024ರ ಡಿಸೆಂಬರ್​ ಕೊನೇ ದಿನ ಮಧ್ಯ ಸೇವನೆ ಮಾಡಿ ವಾಹನಗಳನ್ನು ಚಾಲನೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಬಾರದು. ಪೊಲೀಸ್​ ಅಧಿಕಾರಿಗಳು ಗಸ್ತು ಕಾರ್ಯದಲ್ಲಿ ಇರುತ್ತಾರೆ. ಒಂದು ವೇಳೆ ಸಿಕ್ಕಾಕಿಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

200 ಮಂದಿ ಹೋಂ ಗಾರ್ಡ್​, 500 ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ, 2 ಕೆಎಸ್​ಆರ್​ಪಿ ತುಕಡಿ, 4 ಡಿಎಆರ್​ ತುಕಡಿ ನೇಮಕ ಮಾಡಿಕೊಂಡಿದ್ದು, ವರ್ಷದ ಕೊನೆಯ ದಿನ ಅಪರಾಧಗಳನ್ನು ತಡೆಗಟ್ಟಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಮಧ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು, ರೆಸ್ಟೋರೆಂಟ್​ ಮಾಲೀಕರ ಸಭೆ ನಡೆಸಲಾಗಿದ್ದು, ಪೂರ್ವ ಅನುಮತಿ ಇಲ್ಲದೆ ಚಟುವಟಿಕೆ ನಡೆಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಜತೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಿ ಮಧ್ಯ ಮಾರಾಟ ಮಿತಿ ಮೀರಬಾರದು. ಈ ಬಗ್ಗೆ ಪೊಲೀಸರು ನಿಗಾವಹಿಸುತ್ತಾರೆ ಎಂದರು.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಓವರ್​ಸ್ಪೀಡ್​, ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಅಧಿಕಾರಿಗಳು ತಪಾಸಣೆ ಮಾಡುತ್ತಿರುತ್ತಾರೆ, ಯಾರಾದರೂ ಸಿಕ್ಕಾಕಿಕೊಂಡರೆ ದಂಡ ಪಾವತಿ ಜತೆಗೆ ದೂರು ದಾಖಲಿಸಲು ಕ್ರಮವಹಿಸಲಾಗುವುದು. ಇದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net