ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ

A meaningful Rajyotsava celebration
Published on

ಮಡಿಕೇರಿ:

ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೇಕೇರಿ ಬಿಳಿಗೇರಿ ಜಂಕ್ಷನ್‌ನಲ್ಲಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಸಾರ್ವಜನಿಕ ಬಸ್ ತಂಗುದಾಣವನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ಮಾಜಿ ಯೋಧರಾದ ಎಂ.ಟಿ. ಚಿಣ್ಣಪ್ಪ, ಚೊಟ್ಟೆಯಂಡ ಅಪ್ಪಾಜಿ, ಕ್ಯಾ. ತುಂತಜ್ಜೀರ ದಯಾನಂದ, ಮೇಕೇರಿ ಗ್ರಾಮ ಪಂಚಾಯತ್ ಸದಸ್ಯ ಎಂ.ಯು. ಹನೀಫ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜ್ಞೀರ ಸಾಬಾ ತಿಮ್ಮಯ್ಯ ಬಸ್ ತಂಗುದಾಣ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭ ಸಮೀಪದಲ್ಲೇ ನೂತನವಾಗಿ ನಿರ್ಮಿಸಲಾದ ಧ್ವಜಸ್ಥಂಭ ಉದ್ಘಾಟಿಸಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಬಿಳಿಗೇರಿ, ಅರ್ವತ್ತೋಕ್ಲು, ಕುಂಬಳದಾಳು, ಹೊದವಾಡ ಗ್ರಾಮಕ್ಕೆ ಮೇಕೇರಿ ಬಿಳಿಗೇರಿ ಜಂಕ್ಷನ್ ನಿಂದ ತೆರಳಬಹುದಾಗಿದ್ದು, ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ ಬಸ್ ತಂಗುದಾಣವನ್ನು ಸ್ಥಳೀಯರಾದ ಹಾಕತ್ತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿಯುಸ್ ಪೆರೆರಾ, ಸ್ಥಳಿಯರಾದ ಚೆಟ್ಟೋಳಿ ನಾಣಯ್ಯ ಹಾಗೂ ಎಂ.ಆg.ï ರಘು ಅವರು ಸಾರ್ವಜನಿಕರು ಹಾಗೂ ದಾನಿಗಳಿಂದ ಆರ್ಥಿಕ ನೆರವು ಪಡೆದು ಒಂದು ವಾರಗಳ ಕಾಲ ಸ್ವತಃ ತಾವೇ ಕೆಲಸ ನಿರ್ವಹಿಸಿ ಕಟ್ಟಡವನ್ನು ನಿರ್ಮಿಸಿರುವುದು ವಿಶೇಷವಾಗಿದೆ.

ಬಸ್ ತಂಗುದಾಣ ಉದ್ಘಾಟಿಸಿದ ಮಾಜಿ ಯೋಧ ಚೊಟ್ಟೆಯಂಡ ಅಪ್ಪಾಜಿ ಮಾತನಾಡಿ ಸ್ಥಳೀಯರ ಪ್ರಯತ್ನದಿಂದ ನೂತನ ಸಾರ್ವಜನಿಕ ಬಸ್ ತಂಗುದಾಣ ನಿರ್ಮಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಬಸ್ ತಂಗುದಾಣವನ್ನು ಶುಚಿತ್ವದಿಂದ ಕಾಪಾಡಿಕೊಂಡು ಹೋಗುವಂತೆ ಕೋರಿದರು. ಮಾಜಿ ಯೋಧರಾದ ಎಂ.ಟಿ. ಚಿಣ್ಣಪ್ಪ ಮತ್ತು ಕ್ಯಾ. ತುಂತಜ್ಜೀರ ದಯಾನಂದ, ಮೇಕೇರಿ ಗ್ರಾಮ ಪಂಚಾಯತ್ ಪಿಡಿಓ ಶ್ರೀಧರ್, ಪಿಯುಸ್ ಪೆರೆರಾ, ಚೆಟ್ಟೋಳಿ ನಾಣಯ್ಯ ಹಾಗೂ ಎಂ.ಆರ್. ರಘು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಧ್ವಜ ಸ್ಥಂಬ ಸ್ಥಳ ದಾನಿಗಳಾದ ಕಾಳೆಯಂಡ ಮಂಜುನಾಥ್, ಕಾಳೆಯಂಡ ಸರೋಜಿನಿ, ಕಾಳೆಯಂಡ ಸುಬ್ಬಯ್ಯ, ಮೇಕೇರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭೀಮಯ್ಯ, ಸ್ಥಳೀಯರಾದ ಪೊನ್ನಚ್ಚನ ಆನಂದ, ಪೊನ್ನಚ್ಚನ ಪವನ್, ಚೆಟ್ಟೋಳಿರ ಸುಧಿ, ಪಿ.ಕೆ. ಹುಸೇನ್, ರಾಬರ್ಟ್, ಪುಟ್ಟುಸ್ವಾಮಿ, ಎಂ.ಎA. ಸುಭಾಶ್ ಸೇರಿದಂತೆ ಸ್ಥಳೀಯ ಮೇಕೇರಿ, ಬಿಳಿಗೇರಿ, ಕಗ್ಗೋಡ್ಲು ಹಾಗೂ ಅರ್ವತ್ತೋಕ್ಲು, ಗ್ರಾಮಸ್ಥರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net