ಆಪರೇಷನ್ ಸಿಂಧೂರ ಬೆಂಬಲಿಸಿ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ

RAICHUR
RAICHUR
Published on

ರಾಯಚೂರು ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಪೈಶಾಚಿಕ ಕೃತ್ಯವೆಸಗಿ ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಪ್ರಧಾನಿ ನೀಡಿದ್ದಾರೆಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ರಾಷ್ಟ್ರ ರಕ್ಷಣಾ ಸಮಿತಿ ಹಾಗೂ ಮಾಜಿ ಸೈನಿಕರಿಂದ ನಗರದಲ್ಲಿ ಶನಿವಾರ ಬೃಹತ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಭಾರತೀಯ ಸೇನೆ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ ಇನ್ನು ಮುಂದೆ ಭಾರತವನ್ನು ಕೆಣಕಿದರೆ ಪಾಪಿಸ್ತಾನ ಸರ್ವನಾಶ ಮಾಡುತ್ತೇವೆಂದು ಎಚ್ಚರಿಸಲಾಗಿದೆ ಎಂದರು.

ನಮ್ಮ ದೇಶದ ಸೈನಿಕರ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುವ ಕಾಂಗ್ರೆಸ್ ಪಕ್ಷದವರಿಗೆ ಈ ದೇಶದ ಬಗ್ಗೆ ಅಭಿಮಾನವಿಲ್ಲ . ಕಾಂಗ್ರೆಸ್ ಪಕ್ಷದ ಶಾಸಕ ಕೊತ್ತೂರು ಮಂಜುನಾಥ ಆಪರೇಷನ್ ಸಿಂಧೂರ ಬೂಟಾಟಿಕೆ ಎಂದಿರುವುದು ಖಂಡನೀಯ. ರಾಜಕೀಯದಲ್ಲಿರಲು ಯೋಗ್ಯರಲ್ಲವೆಂದ ಅವರು ದೇಶದ ಸೈನಿಕರ ಬಗ್ಗೆ ಅವಹೇಳನ ಮಾಡುವುದು ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತಿದೆ ಅದೆ ಪಕ್ಷದ ಶಶಿ ತರೂರು ಮಾತನಾಡಿದ್ದನ್ನು ಕಾಂಗ್ರೆಸ್ಸಿಗರು ಆಲಿಸಬೇಕು ಎಂದರು.

ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ಅಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಮ್ಮ ದೇಶದ ಸೇನೆಯ ಬಗ್ಗೆ ಹೆಮ್ಮೆ ಹೆಚ್ಚಿಸಿದೆ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಮೋದಿಯವರು ಕಲಿಸಿದ್ದಾರೆ ಎಂದರು. ನಂತರ ಯಾತ್ರೆಯು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ತಿರಂಗಾ ಯಾತ್ರೆ ನಗರದ ಅಂಬೇಡ್ಕರ್ ವೃತ್ತ, ಮಹಾನಗರ ಪಾಲಿಕೆ, ಏಕ್ ಮಿನಾರ್, ಸೂಪರ್ ಮಾರ್ಕೆಟ್, ಕಲ್ಲಾನೆ ರಸ್ತೆ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಮಾಜಿ ಸಂಸದ ಬಿ.ವಿ.ನಾಯಕ, ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಶಿವಬಸಪ್ಪ ಮಾಲಿಪಾಟೀಲ್, ರವೀಂದ್ರ ಜಲ್ದಾರ್, ರಾಜಕುಮಾರ್, ಕಡುಗೋಲು ಆಂಜಿನೇಯ, ಶಂಕರ ರೆಡ್ಡಿ, ಉಟ್ಕೂರು ರಾಘವೇಂದ್ರ, ವಿನಯ ಕುಮಾರ್,ಮುಕ್ತಿಯಾರ್, ರಮೇಶ್ ಕುಲಕರ್ಣಿ, ವಿಜಯಕುಮಾರ ಸಜ್ಜನ, ಕೊಟ್ರೇಶಪ್ಪ ಕೋರಿ,ಶರಣಬಸವ ಜೋಳದೆಡಗಿ, ಶಿವಕುಮಾರ್ ಪೊಲೀಸ್ ಪಾಟೀಲ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net