27ಕ್ಕೆ ಬೆಳಗಾವಿ ವಿಭಾಗಮಟ್ಟದ ನೇಕಾರರ ಬೃಹತ್ ಸಭೆ

A massive meeting of weavers of Belgaum division level on 27th
ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ನೇಕಾರರ ಸಭೆಯಲ್ಲಿ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿದರು. ಸಂಗಪ್ಪ ಉದಗಟ್ಟಿ, ಲಕ್ಕಪ್ಪ ಪವಾರ, ಆನಂದ ಜಗದಾಳ, ಮಹಾದೇವ ನುಚ್ಚಿ, ಆನಂದ ಜೀರಗಾಳ, ಅಶೋಕ ಕರ್ಲಟ್ಟಿ, ಆನಂದ ಬಾಣಕಾರ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾನಕಾಪುರದಲ್ಲಿ ಆ.19 ರಂದು ಸಭೆ ಸೇರಿ ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ನ್ಯಾಯಯುತ ಬೇಡಿಕೆಗಳ ಕುರಿತು ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ದೇವಾಲಯ ಆವರಣದಲ್ಲಿ ಗುರುವಾರ ಸಂಜೆ ನಡೆದ ನೇಕಾರರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜವಳಿ ಉದ್ಯಮ ರಕ್ಷಣೆ ಮಾಡದೆ ಅವಸಾನದತ್ತ ತಳ್ಳುತ್ತಿದೆ. ಮೂಲ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ನೇಕಾರರಿಗೆ ಹಿಂದಿನ ಸರ್ಕಾರಗಳು ನೀಡಿದ್ದ ರಿಯಾಯಿತಿ ದರ ವಿದ್ಯುತ್ ಆಕರಣೆ ಕೈ ಬಿಟ್ಟು ಇದೀಗ ಕಂಡರಿಯದ ವಿದ್ಯುತ್ ಬಿಲ್ ನೀಡುತ್ತಿರುವುದು ನೇಕಾರರಿಗೆ ಭರಿಸಲಾಗುತ್ತಿಲ್ಲ. ಸರ್ಕಾರ ಮತ್ತು ಹೆಸ್ಕಾಂ ಎಷ್ಟೇ ಒತ್ತಡ ಹಾಕಿದರೂ ಯಾವೊಬ್ಬ ನೇಕಾರನೂ ವಿದ್ಯುತ್ ಬಿಲ್ ತುಂಬಬಾರದು. ಸಂಪರ್ಕ ಕಡಿತಕ್ಕೂ ಅವಕಾಶ ನೀಡಬಾರದೆಂದು ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು ಎಂದರು.

ಆ.27 ರಂದು ಬೆಳಗಾವಿ ವಿಭಾಗಮಟ್ಟದ ನೇಕಾರರ ಸಭೆ ಬನಹಟ್ಟಿಯಲ್ಲಿ ನಡೆಯಲಿದೆ. ಭರವಸೆ ಹೊರತಾಗಿ ನೇಕಾರರ ಬದುಕಿಗೆ ಭದ್ರತೆ ನೀಡುವುದು ಸರ್ಕಾರಗಳ ಹೊಣೆಗಾರಿಕೆಯಾಗಿದೆ. ಹೋರಾಟ ಬಲಿಷ್ಠಗೊಳಿಸಲು ರಾಜ್ಯಾದ್ಯಂತ ನೇಕಾರರು ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

ಸಂಗಪ್ಪ ಉದಗಟ್ಟಿ, ಲಕ್ಕಪ್ಪ ಪವಾರ, ಆನಂದ ಜಗದಾಳ, ಮಹಾದೇವ ನುಚ್ಚಿ, ಆನಂದ ಜೀರಗಾಳ, ಅಶೋಕ ಕರ್ಲಟ್ಟಿ, ಆನಂದ ಬಾಣಕಾರ, ಕಾಡಪ್ಪ ಕೊಕಟನೂರ, ಬಸು ಚಿಂಚಖಂಡಿ ಸೇರಿ ರಬಕವಿ-ಬನಹಟ್ಟಿ, ರಾಂಪುರ, ಹೊಸೂರ, ಆಸಂಗಿ, ಹುನ್ನೂರು, ಮಹಾಲಿಂಗಪುರ, ತೇರದಾಳದ ಸಾವಿರಾರು ನೇಕಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net