ಆರೋಗ್ಯವಂತರೇ ನಿಜವಾದ ಶ್ರೀಮಂತರು

mkg
Published on

ನ್ಯಾಮತಿ: ಪ್ರತಿಯೊಬ್ಬರಿಗೂ ಆರೋಗ್ಯವೆಂಬುದು ಅತೀ ಮುಖ್ಯ. ಇಂದಿನ ದಿನಮಾನಗಳಲ್ಲಿ ಸಂಪೂರ್ಣ ಆರೋಗ್ಯವಂತರೇ ನಿಜವಾದ ಶ್ರೀಮಂತರು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬಂಜಾರ ಯುವಕರು ಹಾಗೂ ವಿದ್ಯಾರ್ಥಿ ಸಂಘದಿಂದ ಈಚೆಗೆ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣ ಗಳಿಕೆಯ ಬೆನ್ನತ್ತಿ ಆರೋಗ್ಯ ಕೆಡಿಸಿಕೊಳ್ಳಬಾರದು. ಆಧುನಿಕತೆ ಬೆಳೆದಂತೆ ಮನುಷ್ಯನ ಜೀವನ ಯಂತ್ರದಂತಾಗಿದ್ದು, ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಕಷ್ಟು ಜನರು ಆರ್ಥಿಕ ಸಮಸ್ಯೆಯಿಂದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಆಗುವುದಿಲ್ಲ. ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸುವುದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೂಪಾ, ತಾಪಂ ಮಾಜಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಬಿಜೆಪಿ ಉಪಾಧ್ಯಕ್ಷ ಡಿ.ಎನ್. ಗಿರೀಶ್, ಗ್ರಾಪಂ ಸದಸ್ಯ ಚನ್ನೇಶ್, ಡಾ. ಜಯಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net