ಸಾಮೂಹಿಕ ಯೋಗ ಪ್ರದರ್ಶನ

21-06-25--krs 2 (3)
Published on

ಕೆ.ಆರ್.ಸಾಗರ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ಮುಖ್ಯ ರಸ್ತೆಯಲ್ಲಿರುವ ಬಿಜಿಎಸ್ ಬಾಲ ಜಗತ್ ಶಾಲಾ ಆವರಣದಲ್ಲ್ಲಿ ಶನಿವಾರ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು.

ಪ್ರತಿನಿತ್ಯ ಯೋಗದಿಂದ ನಮ್ಮ ಆರೋಗ್ಯ ಉತ್ತಮವಾಗಿ ಕಾಪಡಿಕೊಳ್ಳಬಹುದು. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ನಮ್ಮ ದೇಶ ಯೋಗದ ಬೀಡಾಗಿದ್ದು ಇಂದು ವಿದೇಶಗಳು ಕೂಡ ಯೋಗ ದಿನಾಚರಣೆ ಮಾಡುತ್ತಿವೆ ಎಂದು ತಿಳಿಸಿದ ಮುಖ್ಯಶಿಕ್ಷಕಿ ಆಶಾ ಯೋಗ ದಿನಾಚರಣೆಗೆ ಚಾನೆ ನೀಡಿದರು.

ಶಿಕ್ಷಕಿ ವರ್ಷಿತಾ ಯೋಗದ ಮಹತ್ವಗಳನ್ನು ವಿವರಿಸಿದರು. ನಂತರ ಶಿಕ್ಷಕ ಕೃಷ್ಣ ಮತ್ತು ತಂಡದ ಶಿಕ್ಷಕರ ಜೊತೆಗೂಡಿ ವಿದ್ಯಾಥಿಗಳಿಗೆ ಸೂರ್ಯ ನಮಸ್ಕಾರ ಹಾಗೂ 13 ವಿವಿಧ ಯೋಗಗಳನ್ನು ಮಾಡಿದರು.

ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಸಿಬ್ಬಂದಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net