ಕಣ್ಣೀರು ಸುರಿಸುತ್ತಿದೆ ಆಂಜನೇಯ ವಿಗ್ರಹ! ಮಾರುತಿ ದೇಗುಲದಲ್ಲಿ ಹನುಮ ಜಯಂತಿ ದಿನವೇ ನಡೀತು ಅಚ್ಚರಿ

New Project(5)
Published on

ಹುಬ್ಬಳ್ಳಿ: ಇಂದು ನಾಡಿನೆಲ್ಲೆಡೆ ಹನುಮ ಜಯಂತಿ ಸಡಗರ ಕಳೆಗಟ್ಟಿದೆ. ಹನುಮ ನಾಮ ಜಪ ಮೊಳಗುತ್ತಿದೆ. ಈ ದಿವನೇ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ಸಂಭವಿಸಿದ್ದು, ಇದನ್ನು ನೋಡಲು ದೇಗುಲಕ್ಕೆ ಜನಸಾಗರವೇ ಬರುತ್ತಿದೆ.

ಹನುಮ ವಿಗ್ರಹದ ಕಣ್ಣಿನಲ್ಲಿ ನೀರು ಬರುತ್ತಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಬುಡರಸಿಂಗಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನೆಲೆ ಹನುಮ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಂತನ ಕಣ್ಣಿನಲ್ಲಿ ಹನಿ ಹನಿ ನೀರು ಸುರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಬೆಳಗ್ಗೆಯಿಂದ ನಿರಂತರವಾಗಿ ಹನುಮಂತ ದೇವರ ಕಣ್ಣಿನಲ್ಲಿ ಹನಿ ಹನಿಯಾಗಿ ನೀರು ಸುರಿಯುತ್ತಲೇ ಇದೆ.

ಬಟ್ಟೆಯಿಂದ ಕಣ್ಣನ್ನು ಒರೆಸಿದರೂ ನೀರು ಬರುತ್ತಲೇ ಇದೆ. ಸಂತೃಪ್ತಿಗೊಂಡು ದೇವರು ಆನಂದಭಾಷ್ಪ ಸುರಿಸುತ್ತಿದ್ದಾರೆ ಎಂದೇ ಸ್ಥಳೀಯರು ಬಣ್ಣಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net