ಭಿಕ್ಷೆ ಕೇಳುವ ನೆಪದಲ್ಲಿ ಮನೆ ಬಾಗಿಲು ತಟ್ಟಿದವ ಚಾಕು ತೋರಿಸಿ ಮಾಂಗಲ್ಯಸರ ಕಸಿದು ಪರಾರಿ

kunigal police station
Published on

ತುಮಕೂರು: ಭಿಕ್ಷೆ ಕೇಳುವ ನೆಪದಲ್ಲಿ ಮನೆ ಬಾಗಿಲಿಗೆ ಬಂದವ ಚಾಕು ತೋರಿಸಿ ಮಹಿಳೆಯ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಇಂತಹ ಘಟನೆ ಕುಣಿಗಲ್ ತಾಲೂಕಿನ ಹೊನ್ನೇಗೌಡನಪಾಳ್ಯದಲ್ಲಿ ಸಂಭವಿಸಿದೆ. ಪಾರ್ವತಮ್ಮ ಎಂಬುವರು ಸರ ಕಳೆದುಕೊಂಡವರು. ಮನೆಯಲ್ಲಿ ಪಾರ್ವತಮ್ಮ ಒಬ್ಬರೇ ಇದ್ದರು. ಈ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಮನೆ ಬಾಗಿಲ ಬಳಿ ಬಂದ ದುಷ್ಕರ್ಮಿಯೊಬ್ಬ, 'ಭಿಕ್ಷೆ ಹಾಕಿ ತಾಯಿ' ಎಂದು ಬಾಗಿಲು ತಟ್ಟಿದ್ದಾನೆ.

ಯಾರೋ ಭಿಕ್ಷುಕ ಇರಬೇಕು ಎಂದು ಪಾರ್ವತಮ್ಮ ಬಾಗಿಲು ತೆಗೆದದ್ದೇ ತಡ ದುಷ್ಕರ್ಮಿ ಚಾಕು ತೋರಿಸಿ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net