

ಮಂಡ್ಯ: ಪ್ರತಾಪ್ ಸಿಂಹ ಹುಷಾರಪ್ಪ... ಸಂಸದ ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ನಾನು ಹೇಳ್ತೀನಿ... ಎಂದು ನಾಗಮಮಂಗಲ ಶಾಸಕ ಸುರೇಶ್ಗೌಡ ಹೇಳಿದರು.
ಹೀಗಂತ ಶಾಸಕರು ಯಾಕೆ ಹೇಳಿದ್ದು ಗೊತ್ತಾ? ಮಂಡ್ಯ ಸಂಸದೆ ಸುಮಲತಾ ಅಂಬರೀಷ್ಗೆ ಟಾಂಗ್ ಕೊಡಲು! ಹೌದು, ಮಂಡ್ಯ ಜಿಲ್ಲೆಯಲ್ಲಿ ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾ ಮಾತಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸುರೇಶ್ಗೌಡ, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲಸ ಮಾಡಲ್ಲ, ಆ ಕ್ಷೇತ್ರದ ಜನರೂ ನನ್ನ ಬಳಿಯೇ ಬರ್ತಾರೆ ಅಂತನೂ ಸುಮಲತಾ ಹೇಳ್ತಾರೇನೋ... ಅದ್ಕೆ ಹುಷಾರಪ್ಪ ಅಂತ ನಾನು ಪ್ರತಾಪ್ ಸಿಂಹಗೆ ಹೇಳ್ತೀನಿ ಎಂದು ಲೇವಡಿ ಮಾಡಿದರು.