ಕರೊನಾದಿಂದ ಮೃತಪಟ್ಟ ಔಷಧ ವ್ಯಾಪಾರಿ ಕುಟುಂಬಕ್ಕೆ 3 ಲಕ್ಷ ರೂ. ನೀಡಿ ಮಾನವೀಯತೆ ಮೆರೆದ ಮ್ಯಾನ್​ಕೈಂಡ್

New Project (23)
Published on

ಮಂಡ್ಯ: ಮಹಾಮಾರಿ ಕರೊನಾ ಸೋಂಕಿನಿಂದ ಮೃತಪಟ್ಟ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ(MDCDO) ಕಾರ್ಯಕಾರಿ ಮಂಡಳಿ ಸದಸ್ಯ, ವರುಣ್ ಮೆಡಿಕೆಲ್ಸ್ ಬಿಂಡಿಗನವಿಲೇ ಮಾಲೀಕ ಕೆ.ಎನ್ ದೇವರಾಜು ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್​ ನೀಡಲಾಯಿತು.

ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ ಕಚೇರಿಯಲ್ಲಿ ಮ್ಯಾನ್ ಕೈಂಡ್ ಫಾರ್ಮ ಲಿ.(MANKIND) ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕೆ.ಎನ್.ದೇವರಾಜು ಅವರ ಮಗ ವರುಣ್​ಗೆ ಮ್ಯಾನ್ ಕೈಂಡ್ ಸಂಸ್ಥೆ ಮುಖ್ಯಸ್ಥರಾದ ಮನೀಶ್ ಹೆರೋರ, ಸಿದ್ದಲಿಂಗೇಶ, ಪಂಕಜ್ ಅವರು ಪರಿಹಾರ ಹಣದ ಚೆಕ್​ ಅನ್ನು ವಿತರಿಸಿದರು.

ಸಂಸ್ಥೆ ಅಧ್ಯಕ್ಷ ಬಿ.ಲೋಕೇಶ್​ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲೂ ಪ್ರಾಣದ ಹಂಗನ್ನೇ ತೊರೆದು ಔಷಧ ವ್ಯಾಪಾರಿಗಳು ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಅದೆಷ್ಟೋ ಔಷಧ ವ್ಯಾಪಾರಿಗಳು ಕರೊನಾಗೆ ಬಲಿಯಾಗಿದ್ದು ನೋವಿನ ಸಂಗತಿ. ಇಂತಹ ಪರಿಸ್ಥಿತಿಯನ್ನು ಮನಗೊಂಡ ಮ್ಯಾನ್​ಕೈಂಡ್ ಸಂಸ್ಥೆಯು ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಮನವಿ ಮೇರೆಗೆ ದೇವರಾಜ್ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಹಣ ನೀಡಿ ನೊಂದವರಿಗೆ ಆಸರೆಯಾಗಿದೆ ಎಂದರು. ಸಂಸ್ಥೆಯ ಪ್ರಭಾಕರನ್, ರಾಜಶೇಖರ್, ಮುನಿಸಿದ್ದೇಗೌಡ, ಮಹೇಶ್, ಕೃಷ್ಣೇಗೌಡ , ನಂಜೇಗೌಡ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net