ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯ: ಸಿಎಂ ಬೊಮ್ಮಾಯಿ‌

cm bommai
Published on

ಬೆಂಗಳೂರು: ರಾಜ್ಯದ ದಕ್ಷಿಣ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಪರ ಅಲೆ ಸೃಷ್ಟಿಯಾಗಿದ್ದು, ವಿವಿಧ ಪಕ್ಷಗಳ ಹಲವು ಮುಖಂಡರು, ಉತ್ಸಾಹಿ‌ ಯುವ ಸಮೂಹ ಪಕ್ಷದ ಪರ ಒಲವು ತೋರುತ್ತಿದ್ದಾರೆ. ಹಂತ ಹಂತವಾಗಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ ಸಿಎಂ, 90ನೇ ಜನ್ಮದಿನದ ಶುಭ ಹಾರೈಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪಕ್ಷದ ತತ್ವ-ಸಿದ್ಧಾಂತ, ವಿಚಾರಗಳನ್ನು ಒಪ್ಪಿ ಬರುವವರನ್ನು ಸೇರಿಸಿಕೊಳ್ಳಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯವಾಗಲಿದೆ ಎಂದು ಹೇಳುವ ಮೂಲಕ ಗಮನಸೆಳೆದರು.

ಮಂಡ್ಯದಲ್ಲಿ ಸಮಾವೇಶ ಸಂಘಟಿಸುವ ವಿಷಯ ಚರ್ಚೆ‌ ಹಂತದಲ್ಲಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದ ಬೊಮ್ಮಾಯಿ‌, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net