ಮದ್ಯದ ಅಮಲಿನಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಚಾಕು ತೋರಿಸಿ ಬೆದರಿಸಿದವನಿಗೆ ಪೊಲೀಸರು ಮಾಡಿದ್ದೇನು ಗೊತ್ತಾ?

bagepalli
Published on

ಚಿಕ್ಕಬಳ್ಳಾಪುರ: ಖಾತೆ ಮಾಡಿಕೊಡುವಂತೆ ಪುರಸಭೆ ಅಧಿಕಾರಿಗೆ ಇಲ್ಲೊಬ್ಬ ಏನು ಮಾಡಿದ್ದಾನೆ ಗೊತ್ತಾ..? ಏನೋ ಮಾಡಲು ಹೋಗಿ ಕೊನೆಗೆ ಪೊಲೀಸರ ಬಳಿ ಥಳಿಸಿಕೊಂಡಿದ್ದಾನೆ.

ಖಾತೆ ಮಾಡಿಕೊಡುವಂತೆ ದುಂಬಾಲು ಬಿದ್ದ ಈ ವ್ಯಕ್ತಿಯ ಹೆಸರು ಗೋವಿಂದ್​, ಕುಡಿದ ಅಮಲಿನಲ್ಲಿ ಕಚೇರಿಗೆ ನುಗ್ಗಿ ಖಾತೆ ಮಾಡಿಕೊಡು ಎಂದು  ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಈತನ ಅವಾಂತರ ನೋಡಿದ ಮುಖ್ಯಾಧಿಕಾರಿ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಈತನಿಂದ ಕೆಲಕಾಲ ಆತಂಕವೇ ಸೃಷ್ಟಿಯಾಯಿತು. ಪೊಲೀಸರು ಬರುವವರೆಗೂ ಈತನ ಹೈ-ಡ್ರಾಮಾ ಮುಂದುವರಿದಿತ್ತು. ಅಲ್ಲಿದ್ದವರು ಹಿಡಿಯಲು ಪ್ರಯತ್ನ ಪಟ್ಟರೂ, ಯಾರಿಗೂ ಹೆದರದ ಈತ ಚಾಕುವಿನಿಂದ ಬೆದರಿಸುತ್ತಿದ್ದ.

ಕೂಡಲೇ ಸ್ಥಳಕ್ಕೆ ಬಂದ ಬಾಗೇಪಲ್ಲಿ ಪೊಲೀಸ್​ ಠಾಣೆಯ ಎಎಸ್​​ಐ ಅಮರೇಶ್​​ಬಾಬು, ಈ ವ್ಯಕ್ತಿಯ ಕೈಯಿಂದ ಚಾಕು ಕಸಿದು, ಈತನನ್ನು ಥಳಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಚೇರಿಗೆ ಬರಬಾರದು ಎಂದು ಹೇಳಿದ್ದರೂ, ಈ ರೀತಿ ಬಂದು ಬೆದರಿಸಿದ್ದಾನೆ ಎಂದು ಮುಖ್ಯಾಧಿಕಾರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಸದ್ಯ ಈತನ ವಿರುದ್ಧ ಬಾಗೇಪಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net