ಮಂಡ್ಯ: ತಾಲೂಕಿನ ಗುಡಿಗೇನಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ಮಾರಾಕಾಸ್ತ್ರದಿಂದ ಚುಚ್ಚಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ಮಾಯಪ್ಪನಹಳ್ಳಿ ಗ್ರಾಮದ ಕುಮಾರ್(45) ಕೊಲೆಯಾದವರು. ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಕಾರ್ಯನಿಮಿತ್ತ ರಾತ್ರಿ 8.30ರ ಸುಮಾರಿಗೆ ಗುಡಿಗೇನಹಳ್ಳಿಗೆ ಹೋಗುವಾಗ ಹತ್ಯೆ ಮಾಡಿದ್ದು, ಯಾರು ಮತ್ತು ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಸ್ಥಳೀಯರ ಮಾಹಿತಿ ಆಧರಿಸಿ ಕೆರಗೋಡು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ಸಹೋದರ ರವಿ ಕೆಲವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.