ಕುಂತೂರು ಗ್ರಾಮದ ಪುರುಷ ನಾಪತ್ತೆ

02 siddaraju 04
Published on

ಯಳಂದೂರು: ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ ನಿವಾಸಿ ಎನ್.ಸಿದ್ದರಾಜು (ಪ್ರಸಾದ್) ಫೆ.27ರಂದು ಮನೆಯಿಂದ ಜಮೀನಿಗೆ ನೀರು ಹಾಯಿಸುತ್ತೇನೆಂದು ಎಂದು ಹೇಳಿ ಹೋದವರು ಕಾಣೆಯಾಗಿದ್ದಾರೆ. ಅಗರ -ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಸಹೋದರ ಮಹಾದೇವ ದೂರು ನೀಡಿದ್ದಾರೆ.

5.2 ಅಡಿ ಎತ್ತರ, ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಬೋಳುತಲೆ, ಗಡ್ಡ ಮೀಸೆ ಬಿಟ್ಟಿರುತ್ತಾನೆ. ಕಾಣೆಯದಾಗ ನೀಲಿ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿದ್ದರು. ಸುಳಿವು ಸಿಕ್ಕಲ್ಲಿ ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ದೂ.08224-295176, ಪಿಎಸ್‌ಐ ಮೊ.9480804654 ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net