

ಶಿವಮೊಗ್ಗ: ವಿದ್ಯಾನಗರದ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಳೇಗುರುಪುರದ ಬಾಲಾಜಿ(40) ಆತ್ಮಹತ್ಯೆ ಮಾಡಿಕೊಂಡವ.
ಅನಾರೋಗ್ಯದಿಂದ ಬಳಲುತ್ತಿದ್ದ ಈತ ಸೋಮವಾರ ಮಧ್ಯಾಹ್ನ ಮನೆ ಸಮೀಪವೇ ರೈಲ್ವೆ ಹಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂರ್ಚೆ ರೋಗದಿಂದ ಬಳಲುತ್ತಿದ್ದ ಕಾರಣ ಆತನ ಪತ್ನಿ ಏಳೆಂಟು ವರ್ಷದ ಹಿಂದೆ ದೂರವಾಗಿದ್ದಳು.
ತಾಯಿ ಮತ್ತು ಸಹೋದರನ ಜತೆ ಹಳೇ ಗುರುಪುರದಲ್ಲಿ ವಾಸವಾಗಿದ್ದು ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ರೈಲಿಗೆ ಅಡ್ಡ ಬಂದಿದ್ದು ಶಿವಮೊಗ್ಗ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.