ಅತ್ಯಾಚಾರ ಯತ್ನ ಕೇಸಿನಲ್ಲಿ ಜೈಲಿಗೆ ಹೋಗಿ ಬಂದಾತ ಗಲಾಟೆ ವಿಚಾರದಲ್ಲಿ ಆತ್ಮಹತ್ಯೆಗೆ ಶರಣು

sadhik
Published on

ಪುತ್ತೂರು: ಆ. 29ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಆಡು ಮೇಯಿಸಲು ಹೋಗಿದ್ದ ಪ.ಜಾ. ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲು ಯತ್ನಿಸಿ, ಜೈಲಿಗೆ ಹೋಗಿ ಬಂದ ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಇಕ್ಬಾಲ್ ಸಾಧಿಕ್(27) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅತ್ಯಾಚಾರಕ್ಕೆ ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಈತನ ಮೇಲೆ ಅಟ್ರಾಸಿಟಿ ಅಡಿಯಲ್ಲಿ ಅತ್ಯಾಚಾರ ಯತ್ನ ಕೇಸು ದಾಖಲಾಗಿ ಜೈಲು ಪಾಲಾಗಿದ್ದನು. ಆಗಸ್ಟ್ 7ರಂದು ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದ. ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ.

ಮಂಗಳವಾರ ಮುಂಡೂರು ಬಳಿ ರಫೀಕ್ ಎಂಬಾತನಿಗೂ ಇಕ್ಬಾಲ್ ಸಾಧಿಕ್ ಮತ್ತಿತರರಿಗೆ ಸಣ್ಣಪುಟ್ಟ ಗಲಾಟೆ ನಡೆದಿತ್ತು, ಇದರಿಂದ ರಫೀಕ್ ತನ್ನ ಮೇಲೆ ದೂರು ನೀಡಬಹುದು ಎಂಬ ಕಾರಣಕ್ಕೆ ಭಯಗೊಂಡು ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net