

ಸಿದ್ದಾಪುರ: ಪಟ್ಟಣದ ಲಕ್ಷ್ಮೀವೆಂಕಟೇಶ ದೇವಾಲಯದಲ್ಲಿ ದೇವರ ಶಿಲಾಮೂರ್ತಿ ಪ್ರತಿಷ್ಠಾಪನೆಯ ಸುವರ್ಣಮಹೋತ್ಸವ ಮತ್ತು ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ಶ್ರೀದೇವಿ ಭೂದೇವಿ ಸಹಿತ ವೆಂಕಟಾಚಲಪತಿಯ ವಿಶೇಷ ವೈಭವದ ಅಲಂಕಾರ ಮಾಡಿ ಶುಕ್ರವಾರ ಪೂಜಿಸಲಾಯಿತು.
ಭಕ್ತಾದಿಗಳು ಬೆಳಗ್ಗೆಯಿಂದಲೇ ಶ್ರೀ ದೇವರ ದರ್ಶನಪಡೆದು ಪೂಜೆ ಸಲ್ಲಿಸಿದರು. ಸಂಜೆ ದ್ವಾದಶ ನಾಮ ಪೂಜೆ , ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.