ದುರಸ್ಥಿಗೆ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಬೆಂಕಿ

mng_20 feb benki
ಪಂಪ್‌ವೆಲ್ ಬಳಿ ದುರಸ್ಥಿಗೆ ಖಾಸಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ನಷ್ಠ ಸಂಭವಿಸಿದೆ. ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು.
Published on

ಮಂಗಳೂರು: ಪಂಪ್‌ವೆಲ್ ಬಳಿ ದುರಸ್ಥಿಗೆ ಖಾಸಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ನಷ್ಠ ಸಂಭವಿಸಿದೆ.

ಕಾಂತೇಶ್ ಎಂಬವರ ಒಡೆತನದ ಟಿಪ್ಪರ್ ಲಾರಿ ದುರಸ್ತಿಗಾಗಿ ಪಂಪ್‌ವೆಲ್ ಸಮೀಪದ ಖಾಸಗಿ ಗ್ಯಾರೇಜ್‌ನಲ್ಲಿ ದುರಸ್ತಿಗಿಡಲಾಗಿತ್ತು. ಗುರುವಾರ ಬೆಳಗ್ಗೆ ವ್ಯಕ್ತಿಯೋರ್ವರು ಈ ಟಿಪ್ಪರ್ ಲಾರಿಗೆ ಬೆಂಕಿ ತಗುಲಿರುವ ಬಗ್ಗೆ ಸುತ್ತಮುತ್ತಲಿನ ಲಾರಿ ಚಾಲಕರಿಗೆ, ಗ್ಯಾರೇಜ್ ಮಾಲಕರಿಗೆ ಮಾಹಿತಿ ನೀಡಿದ್ದರು. ನಂತರ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು.

ಬಟಿಪ್ಪರ್ ಲಾರಿ ಶೇ.80ರಷ್ಟು ಸುಟ್ಟು ಹೋಗಿದ್ದು, ಸಮೀಪವಿದ್ದ ಮಂಜುನಾಥ್ ಕೋಡಿ ಎಂಬರಿಗೆ ಸೇರಿದ್ದ ಅಟೋ ರಿಕ್ಷ, ನಿರಂಜನ್ ಶೆಟ್ಟಿ ಜಲ್ಲಿಗುಡ್ಡೆ ಅವರಿಗೆ ಸೇರಿದ ದ್ವಿಚಕ್ರ ವಾಹನಕ್ಕೂ ಬೆಂಕಿ ತಗುಲಿ ವಾಹನ ಸುಟ್ಟು ಹೋಗಿದೆ. ಅಂದಾಜು 10 ಲಕ್ಷ ರೂ. ನಷ್ಟ ಸಂಭವಿಸಿದೆ. ಅಗ್ನಿ ಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net