24 ಟನ್ ಪಡಿತರ ಅಕ್ಕಿ ತುಂಬಿದ್ದ ಲಾರಿ ವಶ

1001930653
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಎ ದುರು ಪಡಿತರ ತುಂಬಿರುವ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿರುವುದು.
Published on

ಕೊಳ್ಳೇಗಾಲ: ಪಟ್ಟಣದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಎದುರು ಪಡಿತರ ತುಂಬಿದ್ದ ಲಾರಿಯನ್ನು ಪಿಎಸ್‌ಐ ಸುಪ್ರೀತ್ ಹಾಗೂ ಆಹಾರ ನಿರೀಕ್ಷಕ ಪ್ರಸಾದ್ ವಶಕ್ಕೆ ಪಡೆದಿದ್ದಾರೆ.

ಪಡಿತರ ಅಕ್ಕಿ ತುಂಬಿದ ಲಾರಿಯೊಂದು ರಸ್ತೆಯಲ್ಲಿ ನಿಂತಿರುವ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪ್ರಭಾರ ಪಿಎಸ್‌ಐ ಸುಪ್ರೀತ್, ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ಕಂಡು ಲಾರಿಯಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ.

ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ನಿಗಮದ ಮಳಿಗೆಯಲ್ಲಿ ಲಾರಿಯಲ್ಲಿರುವ ಅಕ್ಕಿ ಪ್ರಮಾಣವನ್ನು ತೂಕ ಮಾಡುವ ಪ್ರಕ್ರಿಯೆ ನಡೆಯಿತು.

ಲಾರಿಯಲ್ಲಿ ಸುಮಾರು 24 ಟನ್ ಅಕ್ಕಿ ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್‌ಐ ಸುಪ್ರೀತ್ ವಿಜಯವಾಣಿಗೆ ತಿಳಿಸಿದರು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net