ಗೊಬ್ಬರ ತುಂಬಿದ್ದ ಲಾರಿ ಪಲ್ಟಿ

Fertilizer lorry
ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿ ಗೊಬ್ಬರ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ
Published on

ಗುರುಪುರ: ವಾಮಂಜೂರು ಜಂಕ್ಷನ್‌ಗೆ ಹತ್ತಿರ ರಾಷ್ಟ್ರೀಯ ಹೆದ್ದಾರಿಯಿಂದ ಒಳರಸ್ತೆಗೆ ಸಾಗುತ್ತಿದ್ದ ಗೊಬ್ಬರ ಸಾಗಾಟ ಲಾರಿ ಉರುಳಿ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ. ಮಳೆಯಿಂದಾಗಿ ರಸ್ತೆಯಲ್ಲಿದ್ದ ಮಣ್ಣು ಸಡಿಲಗೊಂಡಿದ್ದರಿಂದ ವೈಟ್ ಗ್ರೋ ಅಣಬೆ ಉತ್ಪಾದನಾ ಘಟಕಕ್ಕೆ ಗೊಬ್ಬರ ಹೇರಿಕೊಂಡು ಬಂದಿದ್ದ ಲಾರಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಹಲವು ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್ ಮುರಿದು ಬಿದ್ದಿವೆ. ಲಾರಿ ರಸ್ತೆಗೆ ಉರುಳುತ್ತಲೇ ಅದರಲ್ಲಿ ತುಂಬಿದ್ದ ಜಾನುವಾರು ಮತ್ತು ಹಕ್ಕಿಗಳ ಹಿಕ್ಕೆಯ ಗೊಬ್ಬರ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಇದೇ ಜಾಗದಲ್ಲಿ ಶುಕ್ರವಾರ ರಾತ್ರಿ ಕಾರೊಂದು ಪಲ್ಟಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net