ಇಡಗುಂದಿಯಲ್ಲಿ ಗಟಾರಕ್ಕಿಳಿದ ಲಾರಿ

LARI PULTI
Published on

ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಇಡಗುಂದಿ ಶಾಲೆಯ ಬಳಿ ಸಂಭವಿಸಿದೆ.

ಸರಕು ತುಂಬಿಕೊಂಡು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗಟಾರದಲ್ಲಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು, ಚಾಲಕ, ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net