ದಿಲ್ಲಿಗೆ ಅಡಕೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ

31sor2
ಸೊರಬ ತಾಲೂಕಿನ ಚನ್ನಾಪುರ ಬಳಿ ಬೆಂಕಿಗೆ ತುತ್ತಾಗಿರುವ ಅಡಕೆ ತುಂಬಿದ ಲಾರಿ.
Published on

ಸೊರಬ: ತಾಲೂಕಿನ ಚನ್ನಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಚಾಲಿ ಅಡಕೆ ತುಂಬಿದ ಲಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದೆ. ಸೊರಬ- ಶಿರಾಳಕೊಪ್ಪ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಸಾಗರ ತಾಲೂಕು ಅನಂದಪುರದ ಐಎಂಎ ಟ್ರೇಡರ್ಸ್‌ನ ಇಂತಿಯಾಜ್ ಅಹಮ್ಮದ್ ಎಂಬವರು ಆನಂದಪುರದಿಂದ 70 ಕೆಜಿಯ 350 ಚಾಲಿ ಅಡಕೆ ಮೂಟೆ ದೆಹೆಲಿಗೆ ಸಾಗಿಸುತ್ತಿದ್ದರು. ಆಗ ಲಾರಿಯ ಬ್ಯಾಟರಿ ಸರ್ಕ್ಯೂಟ್‌ನಿಂ ಬೆಂಕಿ ಹೊತ್ತಿಕೊಂಡು ಲಾರಿ ಭಾಗಶಃ ಸುಟ್ಟು ಹೋಗಿದೆ. 20 ಚೀಲಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಸ್ಥಳಕ್ಕೆ ಸೊರಬ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ. ಚಾಲಕ ಪಾರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net