ಗೊಬ್ಬರ ಚೀಲ ಸಾಗಿಸುತ್ತಿದ್ದ ಲಾರಿ ವಶ

Lorry-sized
Published on

ಶಿರಸಿ: ಲಾರಿಯಲ್ಲಿ 400 ಕ್ಕೂ ಅಧಿಕ ಯೂರಿಯಾ ಗೊಬ್ಬರ ಚೀಲಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಸಂಶಯದ ಮೇಲೆ  ಪೊಲೀಸರು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಿದ ಘಟನೆ ನಗರದಲ್ಲಿ ಸೋಮವಾರ ನಡೆಯಿತು.

 ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಚಂದಾಪುರ ಗ್ರಾಮದಿಂದ ಬೇರೆ ಜಿಲ್ಲೆಗೆ ಯೂರಿಯಾ ಗೊಬ್ಬರ  ಸಾಗಿಸುತ್ತಿತ್ತು. ಲಾರಿ ಚಾಲಕನಲ್ಲಿ ಪರವಾನಗಿ ಇರದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡು ತನಿಖೆಗಾಗಿ ಕೃಷಿ ಇಲಾಖೆಗೆ ನೀಡಲಾಗಿದೆ.   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net