ಈಡೇರಿಸಲ್ಪಟ್ಟಿದೆ ಉಪ್ಪಿನಂಗಡಿಯ ಬಹು ಕಾಲದ ಬೇಡಿಕೆ

Upp_demand
Published on

ಉಪ್ಪಿನಂಗಡಿ: ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸುವ ಮೂಲಕ ಇಲ್ಲಿನ ವೈದ್ಯರು ಶ್ಲಾಘನೀಯ ಕಾರ್ಯವೆಸಗಿದ್ದಾರೆ. ಸೂರ್ಯ ಆಸ್ಪತ್ರೆ ಲೋಕಾರ್ಪಣೆಯಾಗುವ ಮೂಲಕ ಉಪ್ಪಿನಂಗಡಿಯ ಬಹು ಕಾಲದ ಬೇಡಿಕೆ ಈಡೇರಿಸಲ್ಪಟ್ಟಿದೆ ಎಂದು ಸಂಸದ ಬೃಜೇಶ್ ಚೌಟ ತಿಳಿಸಿದರು.

ಸೋಮವಾರ ಉಪ್ಪಿನಂಗಡಿಯಲ್ಲಿ ಆರಂಭಗೊಂಡ ಸೂರ್ಯ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಖ್ಯಾತ ವೈದ್ಯ, ನಿಟ್ಟೆ ಯುನಿವರ್ಸಿಟಿ ಉಪ ಕುಲಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಊರು, ಪಟ್ಟಣ ಅಭಿವೃದ್ಧಿ ಹೊಂದಲು ಆ ಊರಿನಲ್ಲಿ ದೊರಕುವ ಆರೋಗ್ಯ ಸೇವೆ ಮುಖ್ಯವಾಗುತ್ತದೆ. ವ್ಯಕ್ತಿ ಆರೋಗ್ಯವಂತನಾಗಿರಲು ವಿದ್ಯೆ, ಶುದ್ಧ ವಾತಾವರಣ, ಜನರ ಪ್ರೀತಿ, ವಾತ್ಸಲ್ಯ ಮುಖ್ಯವಾಗುತ್ತದೆ. ವೈದ್ಯರು ನೀಡುವ ಸೇವೆ ನಮ್ಮ ಪಾಲಿಗೆ ದೇವರು ಕೊಟ್ಟಿರುವ ಕೊಡುಗೆ. ಅದೇ ರೀತಿಯಲ್ಲಿ ಉಪ್ಪಿನಂಗಡಿಯಲ್ಲಿ ಸೇವೆಗೆ ಅಣಿಯಾದ ಈ ಆಸ್ಪತ್ರೆ ಈ ಭಾಗದ ಜನರಿಗೆ ದೊರೆತ ಕೊಡುಗೆಯಾಗಿದೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಶುಭ ಹಾರೈಸಿದರು.

ಸೂರಂಬೈಲ್ ಫಾರಂ ಶಾಂತಾರಾಮ ಎಸ್., ಶಶಿಮಂಗಳ ದೀಪ ಬೆಳಗಿಸಿದರು.

ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಸೂರಂಬೈಲ್ ಕುಟುಂಬದ ಮಹೇಶ್, ಸ್ಮಿತಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯ ಎ.ಕೃಷ್ಣ ರಾವ್ ಅರ್ತಿಲ, ದೇವಿದಾಸ ರೈ, ವೆಂಕಪ್ಪ ಪೂಜಾರಿ, ಹಿರಿಯ ವೈದ್ಯ ಡಾ.ಕೆ.ಜಿ.ಭಟ್, ಡಾ.ಎಂ.ಆರ್.ಶೆಣೈ, ಡಾ.ರಾಜಾರಾಂ, ಡಾ.ರಮ್ಯಾ ರಾಜಾರಾಂ, ಡಾ.ರಘು, ಡಾ.ಸುಪ್ರೀತ್ ಲೋಬೋ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುನೀಲ್ ದಡ್ಡು, ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿ ಅಧ್ಯಕ್ಷ ಎಚ್.ಯೂಸುಫ್ ಹಾಜಿ, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ಕರುಣಾಕರ ಸುವರ್ಣ, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಎಂ.ಕೆ.ಮಠ, ಶ್ರೀರಾಮ ಪಾತಾಳ, ಚಂದಪ್ಪ ಮೂಲ್ಯ, ಉದಯ ಕಶ್ಯಪು, ಪ್ರಕಾಶ್ ಇಳಂತಿಲ ಉಪಸ್ಥಿತರಿದ್ದರು.

ಆಸ್ಪತ್ರೆ ಪ್ರಧಾನ ವೈದ್ಯ ಡಾ.ರಾಜೇಶ್ ಎಸ್.ಸ್ವಾಗತಿಸಿ, ಡಾ.ಚಂದ್ರಲೇಖಾ ವಂದಿಸಿದರು. ವಿನ್ಸಿ ಬಂಟ್ವಾಳ ನಿರೂಪಿಸಿದರು.

ಸನ್ಮಾನ

ತನ್ನ ಹೆತ್ತವರ ಕನಸನ್ನು ತನ್ನ ಮಕ್ಕಳ ಸಹಕಾರದಿಂದ ಸಾಕಾರಗೊಳಿಸಿದ ಶಾಂತಾರಾಮ ಎಸ್., ಶಶಿಮಂಗಲ ದಂಪತಿಗಳನ್ನು ಗೌರವಿಸಲಾಯಿತು. ಆಸ್ಪತ್ರೆ ನಿರ್ಮಾಣ ಕಾರ್ಯದ ಇಂಜಿನಿಯರ್ ಅರುಣ್ ಕುಮಾರ್, ಗ್ರಾಪಂ ಸದಸ್ಯ ಯು.ಟಿ.ತೌಸೀಫ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net