ಭತ್ತ ನಾಶಪಡಿಸಿದ ಒಂಟಿ ಸಲಗ

18 boodikote 1 aane
Published on

ಬೂದಿಕೋಟೆ: ಹೋಬಳಿಯ ಗಡಿಭಾಗದ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿ ಮುಂದುವರೆದಿದ್ದು, ಸೋಮವಾರ ರಾತ್ರಿ ಕದಿರಿನತ್ತ ಗ್ರಾಮದ ಸಂತೋಷ್​ ರಾವ್​ ಮತ್ತು ಈಶ್ವರ ರಾವ್​ ಎಂಬುವವರ ಗದ್ದೆಗೆ ಲಗ್ಗೆ ಇಟ್ಟ ಒಂಟಿ ಸಲಗ ಭತ್ತ ತಿಂದ್ದು, ಬೆಳೆ ನಾಶ ಮಾಡಿದೆ. ಕದರಿನತ್ತ, ಸಾಕರಸನಹಳ್ಳಿ, ಕುಂದರಸನಹಳ್ಳಿ, ಚತ್ತಗುಟ್ಲಹಳ್ಳಿ, ಕನಮನಹಳ್ಳಿ, ನಾಡಗುಮ್ಮನಹಳ್ಳಿ, ಡಿಪಿ ಹಳ್ಳಿ , ಕೊಳಮೂರು, ದೇವರಗುಟ್ಟಲ್ಲಹಳ್ಳಿ, ತಮಟಮಾಕನಹಳ್ಳ, ರಾಧಾಕೃಷ್ಣಾಪುರ,ಭೀಮಗಾನಹಳ್ಳಿ, ಬಲಮಂದೆ, ಯರಗೊಳ್​ ಮುಂತಾದ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ರಾಗಿ, ತೆಂಗು, ಬಾಳೆ, ಭತ್ತ ಸೇರಿ ವಿವಿಧ ಬೆಳೆ ಆನೆಗಳ ಪಾಲಾಗುತ್ತಿವೆ. ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುವ ಆನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು, ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿವೆ. ಅಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಆನೆಗಳನ್ನು ತಡೆಯಲು ಆನೆ ಕಂದಕ ನಿಮಾರ್ಣ ಮತ್ತು ಸೋಲಾರ್​ ಬೇಲಿ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net