

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಹಾರೇಕೊಪ್ಪ ಬಸ್‌ನಿಲ್ದಾಣ ಪಕ್ಕದ ಆಲಂದೂರು ಕಾಡಿಗೆ ಬಂದಿದ್ದ ಒಂಟಿ ಆನೆಯನ್ನು ಗ್ರಾಮಸ್ಥರು ಬೆದರಿಸಿ ಮುಖ್ಯ ರಸ್ತೆ ದಾಟಿಸಿ ಆರಂಬಳ್ಳಿ ಕಾಡಿಗೆ ಓಡಿಸಿದ್ದಾರೆ.
ಬೆಳಗ್ಗೆ 8 ಗಂಟೆಯ ಹೊತ್ತಿಗೆ ಬಯಲುಮನೆ ಎಂಬಲ್ಲಿಂದ ಆಲಂದೂರು ಕಾಡಿನಮಧ್ಯದಲ್ಲಿ ಮಹಿಳೆಯೊಬ್ಬರು ಹಾರೇಕೊಪ್ಪ ಬಸ್‌ನಿಲ್ದಾಣಕ್ಕೆ ಬರುತ್ತಿದ್ದಾಗ ಒಂಟಿ ಆನೆ ಕಂಡು ಬಂದಿದೆ. ತಕ್ಷಣ ವಾಪಾಸು ಬಂದ ಮಹಿಳೆ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರಾದ ಅಕ್ಷತ್‌ಪುಟ್ಟು, ಹರೀಶ, ತೀರ್ಥೇಶ್,ಎ.ಆರ್.ಮಂಜುನಾಥ್,ವಿಶ್ವನಾಥ ಮುಂತಾದವರು ಒಟ್ಟಾಗಿ ಆಲಂದೂರು ಕಾಡಿಗೆ ಬಂದು ಒಂಟಿ ಆನೆಯನ್ನು ಬೆದರಿಸುತ್ತಾ ಎನ್.ಆರ್.ಪುರ-ಶಿವಮೊಗ್ಗ ಮುಖ್ಯರಸ್ತೆಯನ್ನು ದಾಟಿಸಿ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಓಡಿಸಿದ್ದಾರೆ.