

ಮೈಸೂರು: ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ರೋಗಿಗಳ ಬಾಳಿಗೆ ಬೆಳಕಾಗಬೇಕು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕ ಡಾ.ಎಸ್.ಟಿ.ಶ್ರೀನಿವಾಸ್ ಮೂರ್ತಿ ಸಲಹೆ ನೀಡಿದರು.
ಜೆಎಸ್‌ಎಸ್ ಸ್ಕೂಲ್ ಆ್ ನರ್ಸಿಂಗ್ ವತಿಯಿಂದ ಜೆಎಸ್‌ಎಸ್ ಆಸ್ಪತೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ 36ನೇ ಸಾಲಿನ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಗಿಗಳನ್ನು ಆರೈಕೆ ಮಾಡುವ ಮೂಲಕ ಧೈರ್ಯ ತುಂಬಬೇಕು. ಅವರನ್ನು ನೀವು ಹೇಗೆ ನೋಡಿಕೊಂಡಿರಿ ಎಂಬುವುದನ್ನು ಅವರು ಗುಣಮುಖರಾಗಿ ಹೋದಾಗ ಸ್ಮರಿಸಿಕೊಳ್ಳುತ್ತಾರೆ. ನರ್ಸಿಂಗ್ ವಿದ್ಯಾರ್ಥಿಗಳು ಇಂದು ಹಚ್ಚಿದ ಜ್ಯೋತಿ ನಿಮ್ಮನ್ನು ಅಲ್ಲದೆ, ನಿಮ್ಮ ಸುತ್ತಮುತ್ತಲಿನವರ ಕತ್ತಲೆಯನ್ನು ಹೋಗಲಾಡಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಮಾತನಾಡಿ, ನರ್ಸಿಂಗ್ ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ನಿಸ್ವಾರ್ಥ ಸೇವಾ ಮನೋಭಾವ ಮುಖ್ಯವಾಗಿರುತ್ತದೆ. ರೋಗಿಗಳ ಆರೋಗ್ಯ ಕಾಳಜಿ ವಹಿಸಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಸೇವಾ ಅವಧಿಯಲ್ಲಿ ಎಂದಿಗೂ ತಾಳ್ಮೆ ಕಳೆದುಕೊಳ್ಳಬಾರದು. ರೋಗಿಗಳು ನರ್ಸ್‌ಗಳನ್ನು ಹೆಚ್ಚಾಗಿ ನಂಬಿರುತ್ತಾರೆ ಎಂದರು.