

ಹುಬ್ಬಳ್ಳಿ: ದೇಶ ಸದ್ಯ ಮೂರು ಸಂಕಷ್ಟಗಳನ್ನು ಎದುರಿಸುತ್ತಿದೆ. ಒಂದೆಡೆ ಶತ್ರು ರಾಷ್ಟ್ರಗಳ ಬಾಧೆ. ಮತ್ತೊಂದೆಡೆ ಶತ್ರು ರಾಷ್ಟ್ರವೇ ಸೃಷ್ಟಿಸಿದ ಕರೊನಾ ಸೋಂಕು. ಇವರೆಡರ ನಿರ್ವಹಣೆಗೆ ಆರ್ಥಿಕ ಹೊರೆಯೂ ಎದುರಾಗಿದೆ ಎಂದು ಏರ್ ಕಮಾಂಡರ್ ಸಿ.ಎಸ್. ಹವಾಲ್ದಾರ್ ಹೇಳಿದರು.
ನಗರದ ಕಿಮ್್ಸ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಿಮ್್ಸ-ಮಜೇಥಿಯಾ ಫೌಂಡೇಷನ್ ಮಧ್ಯೆ ಒಪ್ಪಂದ ಪತ್ರ ಹಸ್ತಾಂತರ ಹಾಗೂ ಸಹಾಯವಾಣಿ ತಂಡದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೈದ್ಯರೀಗ ಕರೊನಾ ಸೇನಾನಿಗಳು. ತಮ್ಮ ಜೀವ ತೆತ್ತು ರೋಗಿಗಳ ಪ್ರಾಣ ಉಳಿಸುತ್ತಿದ್ದಾರೆ. ಅವರ ಸೇವೆ ಅಪಾರವಾದುದು ಎಂದು ಬಣ್ಣಿಸಿದರು.
ಕಿಮ್್ಸ ಆಡಳಿತ ಮಂಡಳಿ ಸದಸ್ಯ ಡಾ. ಜಿ.ಬಿ. ಸತ್ತೂರ ಮಾತನಾಡಿ, ಕರೊನಾ ಸೋಂಕು ಹೊರದೂಡಲು ವ್ಯಾಕ್ಸಿನ್ ಬರುವವರೆಗೆ ಮಾಸ್ಕ್, ಪರಸ್ಪರ ಅಂತರ, ಸ್ಯಾನಿಟೈಸರ್ ಬಳಕೆ ನಿರಂತರವಾಗಿಸಿಕೊಳ್ಳಬೇಕು. ವ್ಯಾಕ್ಸಿನ್ ತರಲು ಭಾರತ ಪ್ರಯತ್ನಿಸುತ್ತಿದೆ. ಅಲ್ಲಿವರೆಗೆ ಈ ಮೂರು ನಮಗೆ ದಿವ್ಯ ಔಷಧ. ಕರೊನಾ ವೈರಸ್ ನಿರ್ಲಕ್ಷ್ಯ ಮಾಡಿದರೆ ಆಪತ್ತು ಎದುರಾಗಲಿದೆ ಎಂದರು.
ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಾಯವಾಣಿ ತಂಡದವರು ಸಂಸ್ಥೆಗೆ ಕೆಟ್ಟ ಹೆಸರು ತಾರದಂತೆ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಎಸ್.ವೈ. ಮುಲ್ಕಿಪಾಟೀಲ, ಕೋವಿಡ್ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ, ಮಜೇಥಿಯಾ ಫೌಂಡೇಷನ್ ಸಲಹಾ ಸಮಿತಿ ಸದಸ್ಯರಾದ ಡಾ.ಕೆ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ ಇತರರು ಇದ್ದರು. ಡಾ. ಮಂಜುನಾಥ ನೇಕಾರ ನಿರೂಪಿಸಿದರು.
ಸಹಾಯವಾಣಿ ತಂಡದ ಕಾರ್ಯ
20 ಜನ ಸ್ವಯಂ ಸೇವಕರು ಕಿಮ್ಸ್ಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಮಾರ್ಗದರ್ಶನ ನೀಡುವರು. ಒಪಿಡಿ, ಐಪಿಡಿ, ರಕ್ತನಿಧಿ, ಪ್ರಯೋಗಾಲಯ, ಇತರ ವಿಭಾಗಗಳಿಗೆ ತೆರಳಲು ಸಹಾಯ ಮಾಡಲಿದ್ದಾರೆ.
ಸದ್ಯ 20 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅಗತ್ಯ ಕಂಡುಬಂದರೆ ಮತ್ತಷ್ಟು ಜನರನ್ನು ನಿಯೋಜಿಸಲಾಗುವುದು. ರೋಗಿಗಳು ಇಲ್ಲವೆ ಅವರ ಸಂಬಂಧಿಕರು ಹೊರಗಡೆ ಕುಳಿತು ಊಟ ಮಾಡುತ್ತಿದ್ದಾರೆ. ಅವರಿಗಾಗಿ ಶೆಲ್ಟರ್ ನಿರ್ವಿುಸಿ, ಬೆಂಚ್ ಹಾಕಿಸಿ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗುವುದು.-ಜಿತೇಂದ್ರ ಮಜೇಥಿಯಾ, ಮಜೇಥಿಯಾ ಫೌಂಡೇಷನ್ ಚೇರ್ಮನ್