ಅಧ್ಯಾತ್ಮ ಚಿಂತನೆಯಿAದ ಜೀವನ ಸಾರ್ಥಕ

29sor3
ಸೊರಬದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಸಾಗರದ ಡಿ.ಆರ್.ಹೆಗಡೆ ಮತ್ತು ತಂಡದವರು ಅಕ್ಕಮಹಾದೇವಿ ವಚನ ಕಥಾ ಶ್ರವಣ ಹಾಗೂ ವಚನ ವಿಶ್ಲೇಷಣೆ ನಡೆಸಿಕೊಟ್ಟರು. ಡಾ.ಮಹಾಂತ ಸ್ವಾಮೀಜಿ, ರೇಣುಕಮ್ಮ ಗೌಳಿ, ಡಿ.ಶಿವಯೋಗಿ, ಶಂಕರ್ ಶೇಟ್ ಇದ್ದರು.
Published on

ಸೊರಬ: ಸಾಂಸಾರಿಕ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆಗಳಿAದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪಟ್ಟಣದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಬದುಕು ಬಾಳೆ ದಿಂಡಿನAತೆ ಎಷ್ಟು ಸುಲಿದರೂ ಬರಿದಾಗುತ್ತ ಹೋಗುತ್ತದೆ. ಕೊನೆಯಲ್ಲಿ ದಿಂಡಿನ ತಿರುಳು ದೊರೆಯುತ್ತದೆ. ಅದರಂತೆ ಬದುಕಿನಲ್ಲಿ ಏನೇ ಕಷ್ಟ ಸುಖಗಳು ಬಂದರೂ ಅರಿವಿನ ಬದುಕಿನಿಂದ ದಾರ್ಶನಿಕರ ವಿಚಾರಧಾರೆಗಳ ಜತೆಗೆ ಆಧ್ಯಾತ್ಮಿಕವಾಗಿ ಲೌಕಿಕ ಜೀವನದಲ್ಲಿ ಪುರಾಣ, ಪುಣ್ಯ ಕಥೆಗಳನ್ನು ಕೇಳುವ, ಓದುವ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.
ಅಕ್ಕಮಹಾದೇವಿ ಸೇರಿ ಶಿವಶರಣರು ತಮ್ಮ ಕಾಯಕದ ಜತೆಗೆ ಆಶಾವಾದಿಗಳಾಗಿ ಬದುಕಿ ಬಾಳಿದವರು. ಹಾಗಾಗಿ ೧೨ನೇ ಶತಮಾನದಲ್ಲಿ ಮೌಢ್ಯ ಹೋಗಲಾಡಿಸಲು ಪ್ರಯತ್ನ ನಡೆಸಿ ಸ್ವಾಸ್ಥ÷್ಯ ಸಮಾಜಕ್ಕೆ ಪ್ರೇರಣೆ ನೀಡಿದರು ಎಂದು ತಿಳಿಸಿದರು.
ಸಾಗರದ ಡಿ.ಆರ್.ಹೆಗಡೆ ಅವರು ಅಕ್ಕಮಹಾದೇವಿ ಅವರ ವಚನ ಕಥಾ ಶ್ರವಣ ಹಾಗೂ ವಚನ ವಿಶ್ಲೇಷಣೆ ಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ನಾಗರಾಜ್ ತಬಲದಲ್ಲಿ ಹಾಗೂ ಶ್ವೇತಾ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು. ವಚನ ಕಥಾ ಶ್ರವಣ ಪ್ರಾಯೋಜಕ ಸದಾನಂದಗೌಡ್ರು, ದಾಸೋಹ ನಡೆಸಿಕೊಟ್ಟ ಹೇಮರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಡಿ.ಶಿವಯೋಗಿ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಲತಾ, ಅಶೋಕ್ ಅಂಡಿಗೆ, ಡಾ. ಜ್ಞಾನೇಶ್, ಕೃಷ್ಣಾನಂದ, ಡಿ.ಎಸ್.ಶಂಕರ್ ಶೇಟ್, ವಿ.ಬಿ.ಜಾವೂರ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net