ವಿಶ್ವಾಸದ ಜೀವನ : ಪಾಸ್ಟರ್ ಇಮಾನ್ಯುವೇಲ್ ಜಯಕರ್ ಕರೆ

trust
Published on

ಕುಂದಾಪುರ: ನಾವು ಯೇಸುವಿನಲ್ಲಿ ನಿಸ್ಸಂದೇಹವಾಗಿ ವಿಶ್ವಾಸ ಇಡಬೇಕು. ನಾವು ವಿಶ್ವಾಸದಲ್ಲಿ ಜೀವಿಸಬೇಕು, ವಿಶ್ವಾಸದಲ್ಲಿ ನಾವೆಲ್ಲ ಒಬ್ಬರನೊಬ್ಬರು ಪ್ರೀತಿಯಿಂದ ಜೀವಿಸೋಣ ಎಂದು ಕುಂದಾಪುರ ಸಿಎಸ್‌ಐ ಚರ್ಚ್ ಪಾಸ್ಟರ್ ಇಮಾನ್ಯುವೇಲ್ ಜಯಕರ್ ಹೇಳಿದರು.

ಕುಂದಾಪುರದ ರೋಜರಿ ಮಾತಾ ಚರ್ಚ್‌ನಲ್ಲಿ ಗುರುವಾರ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಮಾತನಾಡಿದರು. ರೋಜರಿ ಮಾತಾ ಚರ್ಚ್ ಮತ್ತು ಕುಂದಾಪುರ ವಲಯ ಪ್ರಧಾನ ಧರ್ಮಗುರು ಪಾವ್ಲ್ ರೇಗೊ ನೇತೃತ್ವದಲ್ಲಿ ಬೈಬಲ್ ಪವಿತ್ರ ಗ್ರಂಥವನ್ನು ಮೆರವಣಿಗೆಯಲ್ಲಿ ತಂದು, ದೀಪ ಬೆಳಗಿಸಿ ಪ್ರಾರ್ಥನಾ ಕೂಟಕ್ಕೆ ಚಾಲನೆ ನೀಡಿದರು.

ಬೈಂದೂರು ಮಲ್ಬಾರ್ ವಿಧಿ ಧರ್ಮಗುರು ಮಾಥ್ಯು, ರೋಮನ್ ಕೆಥೊಲಿಕ್ ಚರ್ಚ್‌ಗಳ ಎಲ್ಲ ಧರ್ಮಗುರುಗಳು, ಕುಂದಾಪುರ ಕಾನ್ವೆಂಟ್ ಧರ್ಮಭಗಿನಿಯರು, ಕುಂದಾಪುರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಶಾಲೆಟ್ ಫನಾರ್ಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಪಂಗಡದ ಕ್ರೈಸ್ತರು, ಕುಂದಾಪುರ ಚರ್ಚ್ ವಾಳೆಯ ಗುರಿಕಾರರು ಉಪಸ್ಥಿತರಿದ್ದರು. ಕುಂದಾಪುರ ಚರ್ಚ್ ಗಾಯನ ಪಂಗಡ, ಸಿಎಸ್‌ಐ ಗಾಯನ ಪಂಗಡ, ಮಲಬಾರ್ ವಿಧಿಯ ಗಾಯನ ಪಂಗಡ ಪ್ರಾರ್ಥನಕೂಟಕ್ಕೆ ಮೆರಗು ನೀಡಿದ್ದವು. ಪಾವ್ಲ್ ರೇಗೊ ಸ್ವಾಗತಿಸಿದರು. ಹಂಗಳೂರು ಚರ್ಚ್ ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net