

ಶಿರಹಟ್ಟಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿರುವ ಕಿಟ್ಗಳನ್ನು ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆಯಲ್ಲಿ ಸುಧಾರಣೆ ಕಾಣಬೇಕು ಎಂದು ಶಿರಹಟ್ಟಿ-ಲಕ್ಷೆ್ಮೕಶ್ವರ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಪುನೀತ್ ಓಲೇಕಾರ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀಧಗ್ರಾಯೋ ವತಿಯಿಂದ ಕಡಬಡವರನ್ನು ಗುರುತಿಸಿ, ದಿನನಿತ್ಯ ಜೀವನ ನಿರ್ವಹಣೆಗೆ ಅಗತ್ಯವಿರುವ 3500 ರೂ. ಮೌಲ್ಯದ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು. ಈ ವಾತ್ಸಲ್ಯ ಕಿಟ್ನಲ್ಲಿ ಪಾತ್ರೆ, ಚಾಪೆ, ಬಟ್ಟೆ, ಪೌಷ್ಟಿಕ ಧಾನ್ಯಗಳಾದ ಸಿರಿ ವಾತ್ಸಲ್ಯಕಿಟ್ ಹಾಗೂ ವಿವಿಧ ವಸ್ತುಗಳ ಜೀವನಕ್ಕೆ ಸಹಾಯಕಾರಿಯಾಗಿವೆ ಎಂದರು.
ರಾಜ್ಯಾದ್ಯಂತ ಕಡುಬಡವರು ಮತ್ತು ನಿರ್ಗತಿಕರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಉದ್ದೇಶ ಶ್ರೀಧಗ್ರಾಯೋದ್ದಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಫಲಾನುಭವಿಗಳು, ನಿರ್ಗತಿಕರು, ಅಸಹಾಯಕರು ಹಾಗೂ ಗಂಭೀರ ಅನಾರೋಗ್ಯ ಪೀಡಿತರಿಗೆ ತಾಲೂಕಿನಲ್ಲಿ ವಾತ್ಸಲ್ಯ ಯೋಜನಾ ಕಾರ್ಯಕ್ರಮದಡಿ ಪ್ರತಿ ತಿಂಗಳು ತಲಾ 1000 ರೂ.ಗಳಂತೆ 44 ಜನರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ತಾಲೂಕು ಸಮನ್ವಯಾಧಿಕಾರಿ ಮಮತಾ, ವಲಯ ಮೇಲ್ವಿಚಾರಕ ಗಂಗಾಧರ ಪಾಮರೆಡ್ಡಿ, ಸೇವಾಪ್ರತಿನಿಧಿಗಳಾದ ಶ್ರೀನಿವಾಸ ಪತ್ತಾರ, ಪುಷ್ಪಾ ಹೀರೆಮಠ, ದಾವಲಬೀ ಚಿಂಚಲಿ,ಶಾಂತಾ ಬೆನಕೊಪ್ಪ, ಗಂಗೋತ್ರಿ ಗೌಡ, ಮಹಾದೇವಿ ಕಿಗ್ಗಣವರ, ಸ್ವ- ಸಹಾಯ ಸಂಘದ ಸದಸ್ಯರು ಮತ್ತು ಸ್ಥಳೀಯರು ಇತರಿದ್ದರು.