ಕೆರೆಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ದುರಂತ ಸಾವು!

death case
Published on

ಮೈಸೂರು: ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟ ದುರ್ಘಟನೆ ತಿ.ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ರಾಜು ಎಂಬುವರ ಪುತ್ರ ಯಶವಂತ ಕುಮಾರ್​(15), ಮಂಚಯ್ಯರ ಮಗ ಮಹದೇವಪ್ರಸಾದ್(14), ಮಲ್ಲಿಕಾರ್ಜುನ ಎಂಬುವರ ಪುತ್ರ ಆಕಾಶ್​(15) ಮತ್ತು ನಿಂಗರಾಜು ಅವರ ಪುತ್ರ ಕಿಶೋರ್(13) ಸೇರಿ ನಾಲ್ವರು ಇಂದು ಕೆರೆಯಲ್ಲಿ ಈಜಾಡಲು ಹೋಗಿದ್ದರು.

ಈಜಾಡುತ್ತಿದ್ದ ಈ ನಾಲ್ವರು ಬಾಲಕರು ನೀರಲ್ಲಿ ಮುಳುಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಮತ್ತು ಪೊಲೀಸರು ದೌಡಾಯಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಯಶವಂತ ಕುಮಾರ್ ​ಮತ್ತು ಮಹದೇವ ಪ್ರಸಾದ್​ನ ಮೃತದೇಹಗಳು ಪತ್ತೆಯಾಗಿದ್ದು, ಸಂಜೆ 4 ಗಂಟೆಯಾದರೂ ಮತ್ತಿಬ್ಬರ ಶವ ಸಿಕ್ಕಿರಲಿಲ್ಲ.

ಮತ್ತಿಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರಿದೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net