ಸಮಾಜ ಸುಧಾರಣೆಗೆ ಜೀವನ ಮುಡಿಪು

eid milad
Published on

ಶಿರಹಟ್ಟಿ: ವಿಶ್ವ ಕುಟುಂಬದ ಪ್ರವಾದಿಯಾಗಿ ಅವತರಿಸಿದ ಮಹಮ್ಮದ್ ಪೈಗಂಬರರು ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಅಸೂಯೆ, ಅಶ್ಲೀಲತೆ, ಕ್ರೌರ್ಯ, ಮೇಲು ಕೀಳೆಂಬ ಭಾವನೆ ಹೋಗಲಾಡಿಸಿ ಮನುಕುಲಕ್ಕೆ ಉದಾತ್ತ ಸಂದೇಶಗಳನ್ನು ನೀಡಿದರು ಎಂದು ಶಿರಹಟ್ಟಿ ಜಾಮಿಯಾ ಮಸೀದಿಯ ಮೌ. ಮಜಹರಖಾನ ಪಠಾಣ ಹೇಳಿದರು.

ಈದ್ ಮಿಲಾದ್ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಮೆಕ್ಕಾ, ಮದಿನಾ ರೂಪಕಗಳ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪೈಗಂಬರರು ಯಾವುದೇ ಜನಾಂಗ, ಸಮುದಾಯಕ್ಕೆ ಸೀಮಿತರಾಗದೇ ಇಡೀ ವಿಶ್ವ ಕುಟುಂಬದ ಚಿಂತಕರಾಗಿ ಹುಟ್ಟು ಸಾವಿನ ಹಿಂದಿರುವ ಮರ್ಮವನ್ನು ಜಗಕ್ಕೆ ಪರಿಚಯಿಸಿದ್ದಾರೆ. ಸಮಾಜ ಸುಧಾರಣೆಗಾಗಿ ಜೀವನವನ್ನೇ ಮುಡಿಪಾಗಿರಿಸಿದ್ದರು. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಅವರು ನೀಡಿದ ಸಂದೇಶ ಸದಾ ಪ್ರಸ್ತುತ ಎಂದರು.

ಜಹೀರ ಅಬ್ಬಾಸ ಮಕಾನದಾರ, ಹಾಫೀಜ, ಲತೀಫಶಾ ಮಕಾನದಾರ, ಖುರೇಶಿ ಮನಿಯಾರ, ಎಚ್.ಡಿ. ಮಾಗಡಿ, ಮಹ್ಮದ ಇಸಾಕ ಆದ್ರಳ್ಳಿ, ಅಶ್ರತ್ ಢಾಲಾಯತ, ಇಮಾಮಸಾಬ ಮುಳಗುಂದ, ಮುಸ್ತಾಕ ಚೋರಗಸ್ತಿ, ಬಾಬು ಮಾಚೇನಹಳ್ಳಿ. ಗೌಸುಸಾಬ ಮುಳಗುಂದ, ಅಮ್ಜದ್ ಆದ್ರಳ್ಳಿ, ರಿಯಾಜ್ ಢಾಲಾಯತ, ಆಸ್ಕರ ಮುಜಾವರ, ಹಜರೇಸಾಬ ಶಿಗ್ಲಿ, ಜಮೀರ ಮನಿಯಾರ, ಬಾಬಾಜಾನ ಕೋಳಿವಾಡ, ಶೌಕತಲಿ ಮನಿಯಾರ, ಇಲಿಯಾಸ ಕುಬಸದ, ಮುನ್ನಾ ಅತ್ತಾರ, ಬುಡನ್‌ಶಾ ಮಕಾನದಾರ, ಮಹ್ಮದ್ ಢಾಲಾಯತ್, ಜಮೀರ ಕುಬಸದ, ರಫೀಕ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net