

ಮುಳಗುಂದ: ಮೊಹರಂ ಹಬ್ಬದ ಪ್ರಯುಕ್ತ ಸ್ಥಳಿಯ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ನಡೆಯಿತು.
ಸಿಪಿಐ ಅಶೋಕ ಸದಲಗಿ ಮಾತನಾಡಿ, ಮೊಹರಂ ಸೌಹಾರ್ದತೆಯ ಹಬ್ಬವಾಗಿದ್ದು, ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು. ಹೆಜ್ಜೆ ಮೇಳಗಳಿಗೆ ಧ್ವನಿವರ್ಧಕ ಬಳಸುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಸತತ ಮಳೆ ಇರುವುದರಿಂದ ಅಲೈದೇವರು ಸೇರುವ ನಿಗದಿತ ಸ್ಥಳಗಳ ಸುತ್ತಮುತ್ತಲಿನ ಮನೆಗಳ ಮಾಳಿಗೆ ಮೇಲೆ ಯಾರೂ ಹತ್ತಬಾರದು ಎಂದು ಸಲಹೆ ನೀಡಿದರು.
ಬೈಕ್, ವಾಹನ ಸವಾರರು ಸಂಚಾರ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಮಾರುಕಟ್ಟೆ ಬಳಿ ಎಲ್ಲೆಂದರಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದರೆ ದಂಡ ವಿಧಿಸಲಾಗುವುದು. ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡಬೇಡಿ. ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್‌ಗಳನ್ನು ಬೈಕ್‌ಗಳಿಗೆ ಅಳವಡಿಸಿದ್ದರೆ ಕೂಡಲೆ ತೆಗೆದು ಹಾಕಬೇಕು ಎಂದು ಎಚ್ಚರಿಕೆ ನೀಡಿದರು.
ಅಂಜುಮನ್ ಕಮಿಟಿ ಸದಸ್ಯರಾದ ಎ.ಡಿ. ಮುಜಾವರ, ಎ.ಎಂ. ಹುಬ್ಬಳ್ಳಿ, ಮನ್ಸೂರ್ ಹಣಗಿ, ಮುಖಂಡರಾದ ಮೋಹನ ಮದ್ದಿನ, ರಮೇಶ ಮ್ಯಾಗೇರಿ, ಮೋದಿನ್ ಲಾಡಸಾಬನವರ, ದಾದೇಸಾಬ ಛಬ್ಬಿ, ನೂರಹ್ಮದ ಮುಜಾವರ, ಟಿಪ್ಪುಸಾಬ ನದಾಫ್ ಇತರರು ಇದ್ದರು.