

ಕುದೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ನೆಲೆಗಳನ್ನು ನಾಶಗೊಳಿಸಿದ ಪಾಕಿಸ್ತಾನಕ್ಕೆ ಭಾರತ ಪಾಠ ಕಲಿಸಿದೆ ಎಂದು ರಾಮನಗರ ಬಿಜೆಪಿ ಜಿಲ್ಲಾ ಯೂತ್ ಅಧ್ಯಕ್ಷ ಜಗನ್ನಾಥ್ ಹೇಳಿದರು.
ಪಟ್ಟಣದ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಜೆ ಭಾರತೀಯ ಯೋಧರಿಗೆ ಒಳಿತಾಗಲೆಂದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರು ಅಮಾಯಕರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.
ರಾಮನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ ಮಾತನಾಡಿ, ಭರತ ಖಂಡದ ಇತಿಹಾಸದಲ್ಲಿ ನಾರಿಯರ ಮೇಲೆ ಕೈ ಇಟ್ಟಂತವರನ್ನು ಸುಮ್ಮನೆ ಬಿಟ್ಟಿರುವ ಇತಿಹಾಸವಿಲ್ಲ ಎಂದರು.
ಪರಿಸರ ಗೋವಿಂದರಾಜು ಮಾತನಾಡಿದರು.
ಭಯೋತ್ಪಾದಕರ ದಾಳಿಯ ವೇಳೆ ಮಡಿದ ಹುತಾತ್ಮರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.