ಶಿಥಿಲ ಕಟ್ಟಡದಲ್ಲೆ ಮಕ್ಕಳಿಗೆ ಪಾಠ

ಶಿಡ್ಲಟ್ಟ ತಾಲೂಕಿನ ಮದ್ದೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಕೊಠಡಿಯ ದೃಶ್ಯ.
Shithila Kattadalle Makkalige Pata
Published on

ಬಿರುಕುಬಿಟ್ಟಿರುವ ಛಾವಣಿ ಕೆಳಗೆ ಭಯದಲ್ಲೆ ಕುಳಿತುಕೊಳ್ಳಬೇಕು ಮಕ್ಕಳು

ಶಶಿಕುಮಾರ್​.ಎ. ಶಿಡ್ಲಟ್ಟ
ಶಿಥಿಲವಾಗಿರುವ ಶಾಲಾ ಕಟ್ಟಡ, ಬಿರುಕುಬಿಟ್ಟಿರುವ ಕೊಠಡಿಯ ಮೇಲ್ಛಾವಣಿ, ಶಾಲೆಯ ಪಕ್ಕದಲ್ಲಿಯೇ ದಟ್ಟವಾಗಿ ಬೆಳೆದಿರುವ ಕಳೆಗಿಡಗಳು, ಜೋರಾಗಿ ಮಳೆ ಬಂದರೆ ಸೋರುವ ಕೊಠಡಿ, ಬೀಳುವಂತಿರುವ ಗೋಡೆಗಳು ಇದು ತಾಲೂಕಿನ ಮದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.
ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದೇನಹಳ್ಳಿಯಲ್ಲಿ ಸುಮಾರು 70 ಕುಟುಂಬಗಳಿದ್ದು, 350ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ವಿಶೇಷವೆಂದರೆ ಗ್ರಾಮದಲ್ಲಿರುವ ಎಲ್ಲ ಕುಟುಂಬಗಳು ಪರಿಶಿಷ್ಟ ಪಂಗಡ ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಟ್ಟಡವಿಲ್ಲದೇ ಇರುವುದರಿಂದ ಇದೇ ಶಾಲೆಯಲ್ಲಿರುವ ಕೊಠಡಿಗಳಲ್ಲಿಯೇ ಅಂಗನವಾಡಿ ಕಾರ್ಯನಿರ್ವಹಿಸುತ್ತದೆ. ಇನ್ನು ಇರುವ ಒಟ್ಟು 2 ಕೊಠಡಿಗಳು ಶಿಥಿಲಾವಸ್ಥೆ ಹಾಗೂ ಮೂಲ ಸೌಲಭ್ಯವಿಲ್ಲದೆ ಮಕ್ಕಳ ಹಾಜರಾತಿ ಸಂಖ್ಯೆ ** ರಿಂದ ಈಗ 7ಕ್ಕೆ ಇಳಿದಿದೆ. ಗ್ರಾಮದಲ್ಲಿ ಸುಸಜ್ಜಿತ ಶಾಲಾ ಕೊಠಡಿ ಹಾಗೂ ಸೂಕ್ತ ಶಿಕ್ಷಕರಿಲ್ಲದ ಕಾರಣ ಗ್ರಾಮದ ಮಕ್ಕಳು ಬೇರೆ ಗ್ರಾಮಕ್ಕೆ ವಿಧ್ಯಾಭ್ಯಾಸಕ್ಕೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಶಾಲೆಯಲ್ಲಿ ಈ ಹಿಂದೆ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ದಿನೇ ದಿನೆ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದ್ದಂತೆ ಒಬ್ಬರನ್ನು ಈಗಾಗಲೇ ಬೇರೆಡೆಗೆ ವರ್ಗಾವಣೆಗೊಳಿಸಿದ್ದು, ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕುಸಿದ ಮಕ್ಕಳ ಸಂಖ್ಯೆ:
ಇರುವ ಶಿಕ್ಷಕನಾದರೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಪಾಠ ಮಾಡಿದ್ದರೆ ಮಕ್ಕಳ ಹಾಜರಾತಿ ಮತ್ತಷ್ಟು ಇರುತ್ತಿತ್ತು. ಅವರಿಗಿಷ್ಟ ಬಂದ ಸಮಯಕ್ಕೆ ಬರುವ ಶಿಕ್ಷಕರಿಂದ ಶಾಲೆಯ ಹಾಜರಾತಿ ಕುಸಿದಿದ್ದು 1 ನೇ ತರಗತಿಯಲ್ಲಿ ಇಬ್ಬರು, ಎರಡನೇ ತರಗತಿಯಲ್ಲಿ ಒಬ್ಬ, ಮೂರನೇ ತರಗತಿಯಲ್ಲಿ ಒಬ್ಬ, 4ನೇ ತರಗತಿಯಲ್ಲಿ ಒಬ್ಬ ಹಾಗೂ 5ನೇ ತರಗತಿಯಲ್ಲಿ ಇಬ್ಬರು ಮಕ್ಕಳು ಒಟ್ಟು 7 ಮಂದಿ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುತ್ತಿದ್ದಾರೆ. ಈ ಬಗ್ಗೆ ೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಭಾರಿ ಗ್ರಾಮಸ್ಥರು ಮಾಹಿತಿ ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಇಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಬೇರೆ ಶಿಕ್ಷಕರನ್ನು ನೇಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಭಯದಲ್ಲೆ ಪಾಠ:
ಮಳೆ ಬಂದರೆ ಶಾಲಾ ಕೊಠಡಿಗಳು ಸೋರುತ್ತದೆ ಹಾಗೂ ಕೊಠಡಿಗಳಲ್ಲಿ ನೀರು ತುಂಬುವುದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಶಾಲೆಯ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಯವಾಗ ಕುಸಿಯುತ್ತದೆಯೋ ಎನ್ನುವ ಭೀತಿಯಲ್ಲೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು, ಮಕ್ಕಳು ಭಯದಲ್ಲೆ ಪಾಠ ಕೆಳಬೇಕಾಗಿದೆ.

ಕೊಠಡಿ ಸೌಲಭ್ಯ ಕಲ್ಪಿಸದ ಸರ್ಕಾರ
ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ದೇಶದ ಪ್ರತಿಯೊಂದು ಮಗುವೂ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಸರ್ಕಾರಗಳು, ಬಿಸಿಯೂಟ, ವಿದ್ಯಾರ್ಥಿವೇತನ, ಸೈಕಲ್​, ಉಚಿತ ಸಮವಸ, ಪಠ್ಯಪುಸ್ತಕ ಹಾಗೂ ರಭಾಗ್ಯ ಯೋಜನೆ ತಂದಿರುವುದು ಸ್ವಾಗತಾರ್ಹ. ಆದರೆ ಕಲಿಕೆಗೆ ಪೂರಕವಾದಂತಹ ಸುಸಜ್ಜಿತವಾದ ಶಾಲಾ ಕೊಠಡಿ ನಿರ್ಮಾಣ ಮಾಡಿಕೊಡುವಲ್ಲಿ ವಿಫಲವಾಗಿದೆ.

ಶಾಲೆಯ ಕೊಠಡಿಗಳು ಸಂಪೂರ್ಣ ಹಾಳಾಗಿ ಮಳೆ ಬಂದರೆ ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಿದರೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು. ಆದಷ್ಟು ಬೇಗ ನೂತನ ಕಟ್ಟಡ ನಿರ್ಮಾಣ ಮಾಡಿದರೆ ಗ್ರಾಮದ ಮಕ್ಕಳಿಗೆ ಅನುಕೂಲವಾಗುತ್ತದೆ.

ಮುನಿನರಸಿಂಹಪ್ಪ, ಗ್ರಾಪಂ ಸದಸ್ಯ, ಮದ್ದೇನಹಳ್ಳಿ

ಶಿಡ್ಲಟ್ಟ ೇತ್ರ ಶಿಕ್ಷಣಾಧಿಕಾರಿಯಾಗಿ ಬಂದು ಮೂರು ತಿಂಗಳಾಗಿದೆ. ತಾಲೂಕಿನ ಮದ್ದೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಶಾಲೆಯ ಎಸ್​ಡಿಎಂಸಿ ಸಮಿತಿಯಿಂದಾಗಲಿ, ಗ್ರಾಮಸ್ಥರಿಂದಾಗಲಿ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ದೂರು ನೀಡಿದರೇ ಅಗತ್ಯ ಕ್ರಮ ಜರುಗಿಸುವೆ.

ಸಿ.ಎ.ನರೇಂದ್ರಕುಮಾರ್​, ೇತ್ರ ಶಿಕ್ಷಣಾಧಿಕಾರಿ, ಶಿಡ್ಲಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net