ಅರಸಿಕೆರೆಯಲ್ಲಿ ಚಿರತೆಯನ್ನು‌ ಹೊಡೆದು ಕೊಂದ ಗ್ರಾಮಸ್ಥರು!

chita
Published on

ಹಾಸನ: ಇಂದು ಬೆಳಿಗ್ಗೆ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿ ಬೋವಿ ಕಾಲನಿ ಬಳಿ ಇಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆ ಸ್ಥಳೀಯ ಜನರ ಆಕ್ರೋಶಕ್ಕೆ ತುತ್ತಾಗಿ ಕೊಲೆಯಾಗಿದೆ.

ಬೈರಗೊಂಡನಹಳ್ಳಿ ಬೋವಿ ಕಾಲನಿ ಬಳಿ ಈ ಚಿರತೆ ದಾಳಿ ಮಾಡಿತ್ತು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅರವಳಿಕೆ ತಜ್ಞರು ತೆರಳಿದ್ದರು.

ಅರವಳಿಕೆ ಇಂಜೆಕ್ಷನ್ ನೀಡಿದ ನಂತರ ಡಾಕ್ಟರ್ ಮೇಲೆ ಚಿರತೆ ಎರಗಿತ್ತು. ಈ ವೇಳೆ ಅರವಳಿಕೆ ವೈದ್ಯ ಮುರುಳಿ ಕೈಗಳಿಗೆ ಗಾಯವಾಗಿತ್ತು. ಅರವಳಿಕೆ ವೈದ್ಯರ ಮೇಲೆ ದಾಳಿ‌ ಮಾಡಿ ತಪ್ಪಿಸಿಕೊಂಡ ಚಿರತೆ ಬೆಂಡೆಕೆರೆ ಗ್ರಾಮದ ತಾಂಡ್ಯ ಬಳಿ ಪ್ರತ್ಯಕ್ಷ್ಯವಾಗಿತ್ತು. ಚಿರತೆ ಕಂಡ ಕೂಡಲೇ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಹೊಡೆದು ಕೊಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಿರಣ್, ಚಂದ್ರಮ್ಮ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net