

ನಾಗಮಂಗಲ: ಬಳಪದಮಂಟಿಕೊಪ್ಪಲು ಗ್ರಾಮದ ಬಳಿ ನಾಗಮಂಗಲದಿಂದ ಮಂಡ್ಯಕ್ಕೆ ಹೋಗುವ ಹೆದ್ದಾರಿ ಬದಿಯ ಬಿದಿರಿನ ಪೊದೆಯಲ್ಲಿ ಸೋಮವಾರ ಚಿರತೆಯ ಕಳೇಬರ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಚಿರತೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಕಳೇಬರ ಸಂಪೂರ್ಣ ಕೊಳೆತು ಹೋಗಿದೆ. ಒಂದು ವರ್ಷದ ಹೆಣ್ಣು ಚಿರತೆಯು ವಾಹನಕ್ಕೆ ಸಿಲುಕಿ ಗಾಯಗೊಂಡ ನಂತರ ಬಿದಿರಿನ ಪೊದೆಯೊಳಗೆ ಸಾವನ್ನಪ್ಪಿರಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಚಿರತೆಯ ಕಳೇಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಡಲಾಯಿತು. ಸ್ಥಳದಲ್ಲಿ ಎಸಿಎಫ್ ಶಿವರಾಮು, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಮಂಜು, ರಂಗಸ್ವಾಮಿ, ಸಿಬ್ಬಂದಿ ಇದ್ದರು.