ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸು ಕೊಂದ ಚಿರತೆ

10hgr02
ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಪಾಲಕರು ಮತ್ತು ಪಶು ವೈದ್ಯಾಧಿಕಾರಿ.
Published on

ಹಲಗೂರು: ಸಮೀಪದ ನಂಜಾಪುರ ಗ್ರಾಮದಲ್ಲಿ ಬುಧವಾರ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ನಂಜಾಪುರ ಗ್ರಾಮದ ಯಶೋದಾ ಅವರು ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಾಕಿದ್ದರು. ತಡರಾತ್ರಿ ಬಂದಿರುವ ಚಿರತೆಯು ಮನೆಯ ಅವರಣದಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ಮಾಡಿ ಸಾಯಿಸಿದೆ.

ಗಸ್ತು ಅರಣ್ಯ ಪಾಲಕ ಎಂ.ಜೆ.ಉಮೇಶ್, ಪಶುಪಾಲನೆ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ನವೀನ್ ಸ್ಥಳಕ್ಕೆ ಆಗಮಿಸಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು.

ಹಲವಾರು ದಿನಗಳಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಯಿಂದ ಫಸಲು ಹಾಳಾಗುತ್ತಿದೆ. ಇದೀಗ ಚಿರತೆಯ ಹಾವಳಿಯಿಂದ ಕುರಿ, ಮೇಕೆಗಳು ಸಾವೀಗೀಡಾಗಿವೆ. ಚಿರತೆ ದಾಳಿಯಿಂದಾಗಿ ನನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಸಾಕಿದ್ದ ಹಸು ಇಲ್ಲವಾಗಿದೆ. 25 ಸಾವಿರ ರೂ. ನಷ್ಟ ಉಂಟಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಹಾರ ನೀಡಬೇಕೆಂದು ರೈತ ಮಹಿಳೆ ಯಶೋದಾ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net