

ಹಲಗೂರು: ಗುಂಡಾಪುರ ಗ್ರಾಮದ ತೋಟದ ಮನೆಯಲ್ಲಿ ಸಾಕು ನಾಯಿಯನ್ನು ಸೋಮವಾರ ತಡರಾತ್ರಿ ಚಿರತೆ ಎಳೆದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಕಲಾಪ್ರಿಯ ರಾಜು ಎಂಬುವರು ತೋಟದ ಮನೆಯಲ್ಲಿ ವಾಸವಿದ್ದು, ಸೋಮವಾರ ತಡರಾತ್ರಿ ಬಸವನ ಬೆಟ್ಟ ಕಾಡಿನಿಂದ ಬಂದ ಚಿರತೆ ಕಲಾಪ್ರಿಯ ರಾಜು ಅವರ ಸಾಕು ನಾಯಿಯನ್ನು ಎಳೆದೊಯ್ದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲ ಜಮೀನಿನ ರೈತರು ಭಯಭಿತರಾಗಿದ್ದಾರೆ. ಚಿರತೆಯಲ್ಲದೆ, ಬಸವನಬೆಟ್ಟದ ಕಾಡಿನಿಂದ ಆನೆಗಳು ಜಮೀನುಗಳಿಗೆ ದಾಳಿ ಇಡುತ್ತಿದ್ದು, ಬೆಳೆನಾಶ ಮಾಡುತ್ತಿವೆ ಎಂದು ಕಲಾಪ್ರಿಯರಾಜು ಅಳಲು ತೋಡಿಕೊಂಡಿದ್ದಾರೆ.