ತಳವಾರ ಘಟ್ಟದ ಬಳಿ ಬೋನಿಗೆ ಬಿದ್ದ ಚಿರತೆ

9 GVT 02
ಸೆರೆ ಸಿಕ್ಕ ಚಿರತೆ
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ತಳವಾರ ಘಟ್ಟದ ಬಳಿ ಆಶ್ರಯ ಕಾಲನಿಯತ್ತ ಬರುತ್ತಿದ್ದ ಚಿರತೆ, ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಬಿದ್ದಿದೆ.

ಅಂದಾಜು ನಾಲ್ಕು ವರ್ಷದ ಗಂಡು ಚಿರತೆ ಆರೋಗ್ಯವಾಗಿದ್ದು, ಬೋನಿಗೆ ಬಿದ್ದ ನಂತರ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂಗಿಗೆ ಗಾಯ ಮಾಡಿಕೊಂಡಿದೆ. ಗ್ರಾಮದ ಆಶ್ರಯ ಕಾಲನಿ, ಹೋಲಿ ಹಾರ್ಟ್ಸ್ ಶಾಲೆ ಬಳಿ ಚಿರತೆ ಬರುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ತೆರಳಲು ಕೃಷಿ ಕಾರ್ಮಿಕರು ಹಿಂದೇಟು ಹಾಕಿದ್ದರು.

ಗ್ರಾಮಸ್ಥರ ಮನವಿಯಂತೆ ಗ್ರಾಪಂ ನೆರವಿನೊಂದಿಗೆ ಶಾಲೆಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ಎರಡು ದಿನಗಳ ಹಿಂದೆ ಬೋನು ಇಟ್ಟಿದ್ದರು.. ಚಿರತೆ ಬೋನಿಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಖಚಿತ ಪಡಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಮೇಲಾಧಿಕಾರಿಗಳ ಸೂಚನೆಯಂತೆ ಅಭಯಾರಣ್ಯದಲ್ಲಿ ಬಿಡಲಾಗುವುದು ಎಂದು ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಚಂದ್ರ ನಾಯಕ ತಿಳಿಸಿದ್ದಾರೆ. ಆನೆಗೊಂದಿ ಭಾಗದಲ್ಲಿ ಇದುವರಿಗೂ 8 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net