

ನಂಜನಗೂಡು: ತಾಲೂಕಿನ ರಾಂಪುರ ಗ್ರಾಮದ ಗಣೇಶ ನಾಯ್ಕ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಗಂಡು ಚಿರತೆ ಸೆರೆಯಾಗಿದೆ.
4 ವರ್ಷ ವಯಸ್ಸಿನ ಗಂಡು ಚಿರತೆ ಈ ಭಾಗದಲ್ಲಿ ಉಪಟಳ ನೀಡುತ್ತಿದ್ದ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬೋನು ಅಳವಡಿಸಲಾಗಿತ್ತು. ಚಿರತೆಯನ್ನು ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ 3 ದಿನಗಳ ಕಾಲ ಆರೋಗ್ಯ ತಪಾಸಣೆ ನಡೆಸಲು ಇರಿಸಲಾಗಿದೆ. ಹಿರಿಯ ಅಧಿಕಾರಿಗಳ ಆದೇಶ ಪಡೆದು ಚಿರತೆಯನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಆರ್‌ಎಫ್‌ಒ ನಿತೀನ್ ಕುಮಾರ್ ತಿಳಿಸಿದರು.