

ಬೆಳ್ಮಣ್: ಬೋಳ ಕೋಡಿಯಲ್ಲಿ ಗುಣವತಿ ಎಂಬುವರ ಮನೆ ಪಕ್ಕದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿದೆ.
ಬೋಳ ಕೋಡಿಯಲ್ಲಿ ಹಲವಾರು ವರ್ಷಗಳಿಂದ ಚಿರತೆಗಳು ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯವರು ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದ್ದರು. ಈ ಬಾರಿ ಒಂದು ಚಿರತೆಯನ್ನು ಬೋನಿನೊಳಗೆ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಎರಡು ಚಿರತೆಗಳು ಓಡಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದು, ಉಳಿದೆರಡು ಚಿರತೆಗಳನ್ನು ಹಿಡಿಯಿಲು ಮತ್ತೆ ಬೋನು ಅಳವಡಿಸಲಾಗಿದೆ ಎಂದು ಬೆಳ್ಮಣ್ ವಿಭಾಗದ ಅರಣ್ಯ ಅಧಿಕಾರಿ ಹುಕ್ರಪ್ಪ ತಿಳಿಸಿದ್ದಾರೆ. ಚಿರತೆಯನ್ನು ಶಿವಮೊಗ್ಗ ಭಗವತಿ ಆಭಯಾರಣ್ಯಕ್ಕೆ ಸಾಗಿಸಲಾಯಿತು.