ಬೋನಿಗೆ ಬಿದ್ದ ಚಿರತೆ

17-2
ಬೋನಿಗೆ ಬಿದ್ದಿರುವ ಚಿರತೆ
Published on

ದಾಬಸ್ ಪೇಟೆ: ಸೋಂಪುರ ಹೋಬಳಿ ಶಿವಗಂಗೆ ಬೆಟ್ಟದ ತಪ್ಪಲಿನ ಹುರಿಯಪ್ಪನ ಪಾಳ್ಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 9 ವರ್ಷದ ಗಂಡು ಚಿರತೆ ಗುರುವಾರ ಬೆಳಗ್ಗೆ 9 ಗಂಟೆಗೆ ಸೆರೆಸಿಕ್ಕಿದೆ. ಇದು ಶಿವಗಂಗೆ ಭಾಗದಲ್ಲಿ ಬೋನಿಗೆ ಬಿದ್ದ 4ನೇ ಚಿರತೆ ಯಾಗಿದೆ. ಕೆಲ ತಿಂಗಳ ಹಿಂದೆ ಮಹಿಳೆ ಯೊಬ್ಬರನ್ನು ಚಿರತೆ ಕೊಂದು ಹಾಕಿದ್ದ ಪ್ರಕರಣ ಮಾಸುವ ಮುನ್ನವೇ ಸೀಗೆಪಾಳ್ಯ ಗ್ರಾಮದಲ್ಲಿ ಇತ್ತೀಚೆಗೆ ರಾತ್ರಿ ನಾಯಿ ಹಿಡಿಯಲು ವ್ಯಕ್ತಿಯೊಬ್ಬರ ಹಿಂದೆಯೇ ಚಿರತೆ ಬಂದಿತ್ತು. ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net