ಬೋನಿಗೆ ಬಿದ್ದ ಚಿರತೆ

cheeta
ಬೋನಿಗೆ ಬಿದ್ದ ಚಿರತೆ.
Published on

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‌ನ ನೂತನ ನ್ಯಾಯಾಲಯ ಸಂಕೀರ್ಣದ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

ಹಲವು ದಿನಗಳಿಂದ ನಗರದ ಹೌಸಿಂಗ್ ಬೋರ್ಡ್, ಬೀಕನಹಳ್ಳಿ, ಹಂಪಾಪುರ, ಜಿಲ್ಲಾ ಪಂಚಾಯಿತಿ ಹಿಂಭಾಗದ ಪ್ರದೇಶಗಳಲ್ಲಿ ಕಾಣಿಸಿಕೊಂಡು ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆ ಅಲ್ಲಿನ ನಿವಾಸಿಗಳು, ಜಿಪಂ ಸಿಬ್ಬಂದಿಗೂ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಹಿಡಿಯಬೇಕೆಂದು ಒತ್ತಾಯ ಹೆಚ್ಚಿತ್ತು. ಅರಣ್ಯ ಇಲಾಖೆ ನೂತನ ನ್ಯಾಯಾಲಯ ಸಂಕೀರ್ಣದ ಎರಡೂ ಕಡೆ ಬೋನು ಇರಿಸಿತ್ತು. ಭಾನುವಾರ ಬೆಳಗ್ಗೆ ಆಹಾರ ಅರಸಿ ಬಂದಿದ್ದ ಚಿರತೆ ಬೋನಿಗೆ ಬಿದ್ದಿದ್ದು ಸುತ್ತಲಿನ ನಿವಾಸಿಗಳು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ನಗರ ಸಮೀಪದ ಕದ್ರಿಮಿದ್ರಿ ಬಳಿ ಚಿರತೆಯೊಂದು ಜಮೀನಿನ ಬೇಲಿಗೆ ಸಿಕ್ಕಿಕೊಂಡಿದ್ದು, ಅರಣ್ಯ ಇಲಾಖೆ ರಕ್ಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net