ಬಲೆಗೆ ಸಿಲುಕಿದ್ದ ಚಿರತೆ ಸಾವು

IMG-20240301-WA0194
Published on

ಆಲೂರು: ತಾಲೂಕಿನ ಕುಂದೂರು ಹೋಬಳಿ ಸಾಣೇನಹಳ್ಳಿ ಗ್ರಾಮದ ರೈತರೊಬ್ಬರ ತೋಟದ ಬಳಿ ಬಲೆಗೆ ಸಿಲುಕಿಕೊಂಡಿದ್ದ ಚಿರತೆ ಶುಕ್ರವಾರ ಮೃತಪಟ್ಟಿದೆ.


ಗ್ರಾಮದ ಪಟೇಲ್ ದೇವರಾಜ್ ಅವರು ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ತಮ್ಮ ಹೊಲದ ಬಳಿ ಬಲೆ ಹಾಕಿದ್ದರು. ಗುರುವಾರ ರಾತ್ರಿ ಸುಮಾರು ಒಂದು ವರ್ಷದ ಚಿರತೆ ಮರಿಯೊಂದು ಬಲೆಗೆ ಸಿಕ್ಕಿಕೊಂಡು ಚೀರಾಡುತ್ತಿತ್ತು. ಇದನ್ನು ಗಮನಿಸಿದ ಜಮೀನು ಮಾಲೀಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಒದ್ದಾಡುತ್ತಿದ್ದ ಚಿರತೆ ಮರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಲು ಮುಂದಾದರು. ಆದರೆ, ಅಷ್ಟರಲ್ಲಿ ಮೃತಪಟ್ಟಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಲಿಕಿತ್ ಮೀನಾ, ವಲಯ ಅರಣ್ಯಾಧಿಕಾರಿ ಯತೀಶ್, ಉಪ ವಲಯ ಸಂರಕ್ಷಣಾಧಿಕಾರಿ ಪ್ರದೀಪ್, ಗಸ್ತು ಅರಣ್ಯಪಾಲಕರಾದ ಜೈಪಾಲ್, ಪ್ರದೀಪ್, ಡಾ.ಪ್ರಮೋದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net