ಬೆಳ್ಳಂಬೆಳಗ್ಗೆ ಬೆಡ್​ರೂಂಗೆ ನುಗ್ಗಿದ ಚಿರತೆ!

04 04 2025_BGR RURAP_PAGE_5B
Published on

ಆನೇಕಲ್​ : ಜಿಗಣಿಯ ಕುಂಟ್ಲು ರೆಡ್ಡಿ ಲೇಔಟ್​ನಲ್ಲಿನ ಮನೆಗೆ ಗುರುವಾರ ಬೆಳ್ಳಂಬೆಳಗ್ಗೆ ಏಕಾಏಕಿ ನುಗ್ಗಿ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ವೆಂಕಟೇಶ್​ ಮತ್ತು ವೆಂಕಟಲ್ಮ ದಂಪತಿ ಮನೆಗೆ ಚಿರತೆ ನುಗ್ಗಿದ್ದು, ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದವರು ಒಂದು ಕ್ಷಣ ಹೌಹಾರಿದ್ದಾರೆ. ಈ ವೇಳೆ ದಂಪತಿ ಹೊರಬಂದು ಬಾಗಿಲು ಬಂದ್​ ಮಾಡಿ ಚಿರತೆಯನ್ನು ಲಾಕ್​ ಮಾಡಿ ನಿಟ್ಟುಸಿರು ಬಿಟ್ಟರು. ಬಳಿಕ ಐದು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಲಾಯಿತು.

ಮನೆಗೆ ಬಂದಿದ್ದು ಹೇಗೆ?: ಬುಧವಾರ ರಾತ್ರಿ ಕುಂಟ್ಲು ರೆಡ್ಡಿ ಬಡಾವಣೆಯಲ್ಲಿ ಚಿರತೆ ಬೀದಿನಾಯಿಗಳನ್ನು ಬೇಟೆಯಾಡಿ ಇಡೀ ದಿನ ಜಿಗಣಿಯ ಆಸುಪಾಸು ಸುತ್ತಾಡಿದೆ. ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಶಾಲಾ ಬಸ್​ಗಾಗಿ ಕಾಯುತ್ತಿದ್ದ ಮಕ್ಕಳಿಗೂ ಗುದ್ದಿಕೊಂಡು ರಸ್ತೆ ದಾಟಿ ೆ ಓಡಿದೆ. ಚಿರತೆಯನ್ನು ಕಂಡ ಮಕ್ಕಳು ಗಾಬರಿಯಿಂದ ಕೂಗಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಂತರ 8 ಗಂಟೆ ಸುಮಾರಿಗೆ ಚಿರತೆ ಮನೆಯಿಂದ ಮನೆಗೆ ಓಡಾಟ ನಡೆಸಿದೆ. ಚಿರತೆಯನ್ನು ಕಂಡ ಜನರು ಭಯಭೀತರಾಗಿ ಬಾಗಿಲು ಹಾಕಿಕೊಂಡಿದ್ದಾರೆ. ಅಷ್ಟರಲ್ಲಿ ವೆಂಕಟೇಶ್​ ಮತ್ತು ವೆಂಕಟಲ್ಮ ದಂಪತಿ ಮನೆಗೆ ಚಿರತೆ ನುಗ್ಗಿದೆ. ಮನೆಯ ಹಾಲ್​ನಲ್ಲಿ ದಂಪತಿ ಕುಳಿತು ಟಿವಿ ನೋಡುತ್ತಿರುವಾಗಲೇ ಚಿರತೆ ಬೆಡ್​ರೂಮಿನೊಳಗೆ ಹೋಗಿದೆ. ಇದನ್ನು ಕಂಡ ದಂಪತಿ ಕೂಡಲೇ ಮನೆಯಿಂದ ಹೊರಬಂದು ಧೈರ್ಯದಿಂದ ಮನೆಯ ಬಾಗಿಲು ಹಾಕಿ ಚಿರತೆಯನ್ನು ಕೂಡಿಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನರು ಜಮಾಯಿಸಿದ್ದರು, ಹೀಗಾಗಿ ಚಿರತೆ ಕಾರ್ಯಾಚರಣೆಗೆ ಹರಸಾಹಸ ಪಡಬೇಕಾಯಿತು.

ಅರಣ್ಯ ಅಧಿಕಾರಿಗಳ ಕಸರತ್ತು : ಸ್ಥಳಕ್ಕೆ ದೌಡಾಯಿಸಿದ ಜಿಗಣಿ ಪೊಲೀಸರು, ಅರಣ್ಯ ಇಲಾಖೆ, ಮತ್ತು ವೈದ್ಯರ ತಂಡ ಚಿರತೆ ಇದ್ದ ಮನೆಯನ್ನು ಪರಿಶೀಲಿಸಿ ಚಿರತೆ ಆಪರೇಷನ್​ಗೆ ನೀಲಿನೆ ಸಿದ್ಧಪಡಿಸಿತು. ಮನೆಯ ರೂಮ್​ನ ಮಂಚದ ಕೆಳಗೆ ಅವಿತು ಕುಳಿತಿದ್ದ ಚಿರತೆಯನ್ನು ಮೊಬೈಲ್​ ಕ್ಯಾಮರಾ ಬಿಟ್ಟು ಖಚಿತ ಮಾಡಿಕೊಂಡು ಸೆರೆಗೆ ಪ್ರಯತ್ನ ಮಾಡಲಾಯಿತು. ಆದರೆ ಚಿರತೆ ಹೊರಗೆ ಬರಲೇ ಇಲ್ಲ. ಬಳಿಕ ಮತ್ತೆ ಡಾ. ಕಿರಣ್​ ನೇತೃತ್ವದ ಅಧಿಕಾರಿಗಳ ತಂಡ ಒಳ ಹೋಗಿ ರೂಮ್​ನ ಬಾಗಿಲಿಗೆ ಬೋನು ಇಟ್ಟು ಎರಡು ಬಾರಿ ಅರಿವಳಿಕೆ ನೀಡಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಿತು.

ಬನ್ನೇರುಟ್ಟಕ್ಕೆ ಸ್ಥಳಾಂತರ : ಚಿರತೆ ಸೆರೆ ಬಳಿಕ ಬೆಂಗಳೂರು ದಣ ಉಪವಿಭಾಗದ ಸಹಾಯಕ ಅರಣ್ಯ ಸಂರಣಾಧಿಕಾರಿ ಗಣೇಶ್​ ಮಾತನಾಡಿ, ಆರೇಳು ವರ್ಷದ ಹೆಣ್ಣು ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ಕರೆದೊಯ್ದು, ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ವೈದ್ಯರ ತಂಡ ಆಗಮನ : ಬನ್ನೇರುಟ್ಟ ಜೈವಿಕ ಉದ್ಯಾನದ ಪಶುವೈದ್ಯಾಧಿಕಾರಿಗಳಾದ ಡಾ.ಕಿರಣ್​ ಮತ್ತು ಆನಂದ್​ ಹಾಗೂ ಸಿಬ್ಬಂದಿ ಬೋನು ತಂದು ಸತತ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಗೆ ಒಂದು ಅರಿವಳಿಕೆ ಚುಚ್ಚುಮದ್ದು ನೀಡಿದರೂ ಪ್ರೆ ತಪ್ಪದ ಕಾರಣ ಮತ್ತೊಂದು ಅರಿವಳಿಕೆ ನೀಡಿ ಸುರತವಾಗಿ ಸೆರೆಹಿಡಿದು ಬನ್ನೇರುಟ್ಟ ಜೈವಿಕ ಉದ್ಯಾನಕ್ಕೆ ಸಾಗಿಸಿದರು. ಕಾರ್ಯಾಚರಣೆಯಲ್ಲಿ ಎಸಿಎ್​ ಗಣೇಶ್​, ಆರ್​ಎ್​ಒ ಶ್ರೀಧರ್​, ಉಪ ಅರಣ್ಯ ಸಂರಣಾಧಿಕಾರಿ ಬಾಲಕೃಷ್ಣ, ಪಶುವೈದ್ಯಾಧಿಕಾರಿಗಳಾದ ಕಿರಣ್​, ಆನಂದ್​, ಜಿಗಣಿ ಪೊಲೀಸ್​ ಠಾಣಾ ಇನ್​ಸ್ಪೆಕ್ಟರ್​ ಮಂಜುನಾಥ್​ ಅರಣ್ಯ ಸಿಬ್ಬಂದಿ ಇದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾರಿಕೇಡ್​ ಅಳವಡಿಸಿ ಸಾರ್ವಜನಿಕರನ್ನು ದೂರ ಕಳುಹಿಸಿ ಮುಂಜಾಗ್ರತಾ ಕ್ರಮ ವಹಿಸಿದರು. ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಿ ಯಾವುದೇ ಅಹಿತಕರ ಟನೆ ಆಗದಂತೆ ಕ್ರಮ ಕೈಗೊಂಡಿದ್ದರು.

ಮನೆಯೊಳಗೆ ನುಗ್ಗಿದ ಚಿರತೆ ಕಂಡು ದಿಗ್ಭ$ಮೆಯಾಯಿತು. ನಮ್ಮನ್ನು ನೋಡಿಕೊಂಡು ರೂಮಿನೊಳಗೆ ಹೋದ ಮರು ಕ್ಷಣವೇ ಹೆದರದೆ ರೂಮಿನ ಬಾಗಿಲು ಮುಚ್ಚಿ ಚಿಲಕ ಹಾಕಿ ಹೊರಗಡೆ ಬಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. > ವೆಂಕಟೇಶ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net