ಮುಂಡ್ಕೂರು ನಾನಿಲ್ತಾರ್ ನಿವಾಸಿ ಮೇಲೆ ಚಿರತೆ ದಾಳಿ

cheetha- 1
Published on

ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯಿತಿಯ ಮುಲ್ಲಡ್ಕ ನಾನಿಲ್ತಾರ್ ಪರಿಸರ ನಿವಾಸಿಯೊಬ್ಬರ ಮೇಲೆ ಗುರುವಾರ ಮುಂಜಾನೆ ಚಿರತೆ ದಾಳಿ ನಡೆಸಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾನಿಲ್ತಾರ್ ರೈಸ್ ಮಿಲ್ ಬಳಿಯ ನಿವಾಸಿ ಕೃಷ್ಣ ಶೆಟ್ಟಿ ಗಾಯಗೊಂಡವರು. ಗಂಭೀರ ಗಾಯಗೊಂಡಿರುವ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಂಜಾನೆ 3.30ರ ಸುಮಾರಿಗೆ ಬಹಿರ್ದೆಶೆ ಮುಗಿಸಿ ಜಗಲಿಯ ಮೇಲೆ ಕುಳಿತಿದ್ದಾಗ ಚಿರತೆ ಏಕಾಏಕಿಯಾಗಿ ಕೃಷ್ಣ ಶೆಟ್ಟಿ ಅವರ ಮೇಲೆ ದಾಳಿ ನಡೆಸಿ ಕುತ್ತಿಗೆಯನ್ನು ಪರಚಿ ಪರಾರಿಯಾಗಿದೆ. ಬೊಬ್ಬೆ ಕೇಳಿ ಮನೆಯವರು ಎಚ್ಚೆತ್ತ ಕಾರಣ ಚಿರತೆ ಪರಾರಿಯಾಗಿದೆ. ಈ ಭಾಗದಲ್ಲಿ ಇನ್ನೂ ಹಲವಾರು ಚಿರತೆಗಳಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆಹಿಡಿಯುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net