ಶಿಕ್ಷಣಕ್ಕೆ ಪ್ರೇರಣೆ ನೀಡುವ ಕಲಿಕಾ ಹಬ್ಬ

A learning festival that inspires education
ಬನಹಟ್ಟಿ ಲಕ್ಷ್ಮೀ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕನ್ನಡದ ತೇರನ್ನು ಎಳೆಯುವುದರ ಮೂಲಕ ಬಸವರಾಜ ಹನಗಂಡಿ ಉದ್ಘಾಟಿಸಿದರು. ಪ್ರಶಾಂತ್ ಹೊಸಮನಿ, ಬಿ.ಎಂ. ಹಳೆಮನಿ ಮತ್ತಿತರರಿದ್ದಾರೆ.
Published on

ರಬಕವಿ/ ಬನಹಟ್ಟಿ: ಮಕ್ಕಳು ಶೈಕ್ಷಣಿಕ ಸಾಧನೆ ಜತೆಗೆ, ಏಳು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಿಕೆಯ ಪ್ರಗತಿ ಸಾಕ್ಷೀಕರಿಸಲು ಕಲಿಕಾ ಹಬ್ಬ ಸಾಕ್ಷಿಯಾಗಿದೆ ಎಂದು ಪಶ್ಚಿಮ ವಲಯದ ಸಿಆರ್‌ಪಿ ಜಗದೀಶ ಮೇತ್ರಿ ಹೇಳಿದರು.

ಬನಹಟ್ಟಿಯ ಲಕ್ಷ್ಮೀ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸರ್ಕಾರಿ ಶಾಲೆಯ 1ರಿಂದ 5ನೇ ತರಗತಿ ಮಕ್ಕಳಿಗಾಗಿ ಎ್ಎಲ್‌ಎನ್ ಕಲಿಕಾ ಹಬ್ಬ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಉತ್ತೇಜಿಸುತ್ತದೆ. ಶಾಲೆಯಲ್ಲಿ ಸಂತೋಷದಾಯಕ ವಾತಾವರಣ ನಿರ್ಮಾಣ ಮಾಡಲು, ಕಲಿಕೆಯ ಅವಕಾಶಗಳಲ್ಲಿ ಸಮುದಾಯದವರೆಗೂ ವಿಸ್ತರಿಸಿ ಅವರ ಪಾಲ್ಗೊಳ್ಳುವಿಕೆಯಿಂದ ಕಲಿಕೆಯ ಗುಣಮಟ್ಟ ಹೆಚ್ಚಿಸಿ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಹನಗಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಹಳಷ್ಟು ವಿಭಿನ್ನ ರೀತಿಯ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಪ್ರೇರಣೆ ನೀಡುವಂತಹ ಅಂಶಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಶಾಂತ್ ಹೊಸಮನಿ, ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ, ಬನಹಟ್ಟಿ ತಾಲೂಕ ಶಿಕ್ಷಕರ ಸೊಸೈಟಿ ಅಧ್ಯಕ್ಷ ಲೋಕೇಶ್ ಹಂಜಗಿ ಮಾತನಾಡಿದರು.

ಮದನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಡಿ.ಬಿ. ಜಾಯಗೊಂಡ, ಬನಹಟ್ಟಿಯ ಎಚ್.ಪಿ.ಎಸ್ ಸದಾಶಿವನಗರ ಶಿಕ್ಷಕ ಚಿರಂಜೀವಿ ರೋಡಕರ್, ಬನಹಟ್ಟಿ ಎಚ್.ಪಿ.ಎಸ್ ಸದಾಶಿವನಗರ ಶಿಕ್ಷಕಿ ಎಸ್.ವೈ. ಕೌಜಲಗಿ, ಮುಖ್ಯ ಶಿಕ್ಷಕಿ ಎಸ್.ಬಿ. ಕಂಠಿಮಠ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿಕಂದರ್, ಸಿಆರ್‌ಪಿಗಳಾದ ಸಂತೋಷ ಬಡ್ಡಿ, ದಾಕ್ಷಾಯಿಣಿ ಮಂಡಿ, ಶಿವಕುಮಾರ್ ಕೋಕಟನೂರ, ಮಹೇಶ ಸೋರಗಾಂವಿ, ಜಗದೀಶ ಕುಲಹಳ್ಳಿ ಹಾಗೂ ಗಜಾನಂದ ಹತ್ತಳ್ಳಿ, ಕೆ. ಎನ್. ತೆಲಗಾಂವ, ಎಸ್.ಬಿ ಪೂಜಾರಿ, ಬಿ.ಆರ್. ಗುರ್ಲಹೊಸೂರ್, ಸುಮಿತ್ರಾ ಮದನಮಟ್ಟಿ, ಶ್ರೀದೇವಿ ಕಲಕಂಬ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net